Select Your Language

Notifications

webdunia
webdunia
webdunia
webdunia

ಬೆಳಗಾವಿ ಗಡಿ ವಿವಾದ: ಸಮಿತಿಯನ್ನು ಪುನರ್ ರಚಿಸಿದ ಮಹಾರಾಷ್ಟ್ರ

ಬೆಳಗಾವಿ ಗಡಿ ವಿವಾದ: ಸಮಿತಿಯನ್ನು ಪುನರ್ ರಚಿಸಿದ ಮಹಾರಾಷ್ಟ್ರ
ಮುಂಬೈ , ಶುಕ್ರವಾರ, 6 ಮಾರ್ಚ್ 2015 (18:34 IST)
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಗಂಭಿರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಚಿಸಲಾಗಿದ್ದ ಸಮಿತಿಗೆ ಸರ್ಜರಿ ಮಾಡಿದ್ದು, ಪುನರ್ ರಚಿಸಿದೆ.  
 
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ವಿವಾದ ಸಂಬಂಧ ರಚನೆಯಾಗಿರುವ ಈ ಸಮಿತಿಯು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದು, ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಹಾಗೂ ಬಿಜೆಪಿ, ಶಿವಸೇನೆಯ ಹಿರಿಯ ಸಚಿವರು ಸೇರಿದಂತೆ ಸಮಿತಿಯಲ್ಲಿ ಇತರೆ ಎಂಟು ಸದಸ್ಯರಿದ್ದಾರೆ. 
 
ಈ ಸಂಬಂಧ ಸರ್ಕಾರವು ಈಗಾಗಲೇ ಗೊತ್ತುವಳಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ವಿಧಾನಸಭೆಯ ಪ್ರತಿಪಕ್ಷ ನಾಯಕರೂ ಕೂಡ ಸಮಿತಿಯ ಭಾಗವಾಗಿರಲಿದ್ದಾರೆ ಎಂದು ಹೇಳಿದೆ.
 
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತುಂಬಾ ಹಳೆಯ ವಿವಾದವಾಗಿದ್ದು, ಕರ್ನಾಟಕದ ಬೆಳಗಾವಿ ಹಾಗೂ ಇತರೆ ಕೆಲವು ಗಡಿ ಭಾಗಗಳು ತಮಗೆ ಸೇರಿದ್ದೆಂದು ಮಹಾರಾಷ್ಟ್ರ ಮೊದಲನಿಂದಲೂ ವಾದಿಸುತ್ತಾ ಬಂದಿದೆ. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ವಿಚಾರಣಾ ಹಂತದಲ್ಲಿದೆ.

Share this Story:

Follow Webdunia kannada