Webdunia - Bharat's app for daily news and videos

Install App

ಪಾಕ್ ಯುವತಿಯರಿಗಾಗಿ ಮಿಡಿಯಿತು ಸುಷ್ಮಾ ಹೃದಯ

Webdunia
ಮಂಗಳವಾರ, 4 ಅಕ್ಟೋಬರ್ 2016 (17:26 IST)
ಜಾಗತಿಕ ಯುವ ಶಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಕಳೆದ 7 ದಿನಗಳಿಂದ ಭಾರತದಲ್ಲಿದ್ದ 19 ಪಾಕ್ ಯುವತಿಯರು ಇಂದು ತವರಿಗೆ ಮರಳಿದರು. 
ಸೆಪ್ಟೆಂಬರ್ 27 ರಂದು ಅವರು ಭಾರತಕ್ಕೆ ಆಗಮಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಸೀಮಿತ ದಾಳಿ ನಡೆಸಿದ ಬಳಿಕ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಕ್ಕೀಡಾಗಿದ್ದರು. 19 ಯುವತಿಯರು ದೇಶಕ್ಕೆ ಮರಳುವಂತೆ ಪಾಕ್ ಕೂಡ ಒತ್ತಡ ಹೇರಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ಅವರು ದೇಶಕ್ಕೆ ಹಿಂತಿರುವ ಅನಿವಾರ್ಯತೆ ಬಂದೊದಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಚಾಲಕಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸುಷ್ಮಾ ಸ್ವರಾಜ್ ಅವರ ಸುರಕ್ಷಿತ ಮರಳುವಿಕೆಗೆ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದ್ದರು.
 
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಭಾರತೀಯ ಉನ್ನತ ಅಧಿಕಾರಿಗಳು  ಮಕ್ಕಳ ಸುರಕ್ಷತೆ ಬಗ್ಗೆ ಚಿಂತೆ ಬೇಡ ಎಂದು ಭರವಸೆ ನೀಡಿದ ಮೇಲೆ ಪ್ರವಾಸ ನಿಗದಿಯಂತೆ ಮುಂದುವರೆಯಿತು ಎಂದು ಆಯೋಜಕ ಪ್ರಮೋದ್ ಶರ್ಮಾ ಹೇಳಿದ್ದಾರೆ. 
 
ಮಂಗಳವಾರ ಪಾಕ್ ಹುಡುಗಿಯರು ಮತ್ತು ಪುರುಷ ಸದಸ್ಯರ ನಿಯೋಗ ತಮ್ಮ ತವರಿಗೆ ಮರಳಿತು. ಅವರನ್ನು ಬಸ್‌ನಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ವಾಘಾ ಗಡಿ ಮೂಲಕ ಅವರು ಸ್ವದೇಶಕ್ಕೆ ಮರಳಿದರು ಎಂದು ಶರ್ಮಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ನಾವು ಅಪಾಯದಲ್ಲಿಲ್ಲ, ನಾವೇ ಅಪಾಯಕಾರಿಗಳು: ಟ್ರೆಂಡ್ ಆಗ್ತಿದೆ ಸ್ಲೋಗನ್

Operation Sindoor: ಇಡೀ ದೇಶ ಹೆಮ್ಮೆಪಡುವಾಗ ರಾಹುಲ್ ಗಾಂಧಿ, ಖರ್ಗೆ ಭಾರತೀಯ ಸೇನೆ ಬಗ್ಗೆ ಹೇಳಿದ್ದೇನು

Operation Sindoor: ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೆ ಗೊತ್ತು: ಪಾಕಿಸ್ತಾನ ಪ್ರಧಾನಿ

Mock Drill: ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ ಇಲ್ಲಿದೆ ವಿವರ

Karnataka Weather: ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments