Webdunia - Bharat's app for daily news and videos

Install App

ಮತ್ತೆ ಸೀಮಿತ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ: ಪಾಕ್‌ಗೆ ಶಿವಸೇನೆ ಎಚ್ಚರಿಕೆ

Webdunia
ಶುಕ್ರವಾರ, 28 ಅಕ್ಟೋಬರ್ 2016 (16:56 IST)
ಪಾಕ್ ಪದೇ ಪದೇ ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವುದಕ್ಕೆ ಕಿಡಿಕಾರಿರುವ ಶಿವಸೇನೆ ಮತ್ತೆ ಸೀಮಿತ ದಾಳಿಯನ್ನು ನಡೆಸಲು ಅನಿವಾರ್ಯತೆ ತಂದೊಡ್ಡಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. 

"ಭಾರತ ಸೀಮಿತ ದಾಳಿಯನ್ನು ನಡೆಸಿದ ಬಳಿಕವೂ ಪಾಕಿಸ್ತಾನ ಏನನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾವು ಸೀಮಿತ ದಾಳಿ ನಡೆಸಿದ ಬೆನ್ನಲ್ಲಿ ಸುಮಾರು 30 ಬಾರಿ  ಕದನ ವಿರಾಮ ಉಲ್ಲಂಘಿಸಲಾಗಿದೆ. ದಿನನಿತ್ಯವೆಂಬಂತೆ ಇದು ನಡೆಯುತ್ತಿದೆ. ಪಾಕ್ ಮೇಲೆ ಅಂತರಾಷ್ಟ್ರೀಯ ಒತ್ತಡವಿದ್ದರೂ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಪಾಕ್ ವಿರುದ್ಧ ಭಾರತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ", ಎಂದು ಶಿವಸೇನಾ ನಾಯಕಿ ಮನೀಷಾ ಕಯಾಂಡೆ ಗುಡುಗಿದ್ದಾರೆ. 
 
"ನಾವು ಮತ್ತೊಮ್ಮೆ ಸೀಮಿತ ದಾಳಿ ನಡೆಸುವ ಕುರಿತು ಆಲೋಚಿಸುವ ಅಗತ್ಯವಿದೆ.  ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೇನೆ ಜಂಟಿಯಾಗಿ ಭಾರತದ ಮೇಲೆ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎನ್ನಿಸುತ್ತಿದೆ," ಎಂದವರು ಆತಂಕ ವ್ಯಕ್ತ ಪಡಿಸಿದ್ದಾರೆ. 
 
ಕಳೆದ 12 ಗಂಟೆಗಳಲ್ಲಿ ಪಾಕಿಸ್ತಾನ 12 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು 15 ಪಾಕ್ ರೇಂಜರ್‌ಗಳನ್ನು ಹತ್ಯೆಗೈದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments