Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವಿಭಜನೆ: ಗೊಂದಲದ ಗೂಡಾದ ವಿಶೇಷ ಅಧಿವೇಶನ

ಬಿಬಿಎಂಪಿ ವಿಭಜನೆ: ಗೊಂದಲದ ಗೂಡಾದ ವಿಶೇಷ ಅಧಿವೇಶನ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2015 (14:18 IST)
ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕ ಮಂಡನೆಗಾಗಿ ಕರೆಯಲಾಗಿದ್ದ ವಿಶೇಷ ಅಧಿವೇಶನ ಸರಕಾರ ಮತ್ತು ವಿಪಕ್ಷಗಳ ಮಧ್ಯದ ಕೋಲಾಹಲದಿಂದಾಗಿ ಗೊಂದಲದ ಗೂಡಾಗಿ ಪರಿಣಮಿಸಿತು

ಕಾನೂನು ಸಚಿವ ಟಿ.ಬಿ.ಜಯಚಂದ್ರ ಸದನದಲ್ಲಿ ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕ ಮಂಡಿಸಿದಾಗ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿ ಆಕಾಲಿಕ ಮಳೆಯಿಂದಾದ ಹಾನಿಯ ಬಗ್ಗೆ ಚರ್ಚಿಸಿ ಎಂದು ಒತ್ತಾಯಿಸಿದರು.

ವಿಪಕ್ಷಗಳ ಗದ್ದಲದ ಮಧ್ಯೆಯೂ ಸದನದಲ್ಲಿ ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕ ಮಂಡಿಸಲಾಯಿತು.

ಕಲಾಪದ ವೇಳೆಯಲ್ಲಿ ತಾಳ್ಮೆ ಕಳೆದುಕೊಂಡ ಅರಣ್ಯ ಖಾತೆ ಸಚಿವ ರಮಾನಾಥ್ ರೈ  ವಿಪಕ್ಷಗಳ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವರಾದ ಖಾದರ್ ಮತ್ತು ವಸಂತ್ ಬಂಗೇರ್ ರೈ ಅವರನ್ನು ಸಮಧಾನ ಪಡಿಸುವಲ್ಲಿ ಯಶಸ್ವಿಯಾದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಬಿಬಿಎಂಪಿ ಪ್ರಸ್ತುತ 9 ಸಾವಿರ ಕೋಟಿ ಸಾಲದ ಹೊರೆಯನ್ನು ಹೊತ್ತುಕೊಂಡಿದೆ ನಗರದ ಜನತೆಗೆ ಉತ್ತಮ ಅಡಳಿತ ನೀಡುವ ಉದ್ದೇಶದಿಂದ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ಇದರಿಂದ ಅಡಳಿತ ಸುಧಾರಣೆಗೆ ಹೊಸ ಆಯಾಮ ದೊರೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ ಉತ್ತಮ ಅಡಳಿತ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ವಿಭಜನೆ ಮಾಡುತ್ತಿದ್ದೀರಾ ಅದೇ ರೀತಿ ರಾಜ್ಯವನ್ನು ವಿಭಜಿಸುತ್ತೀರಾ? ಎಂದು ಸರಕಾರವನ್ನು ಪ್ರಶ್ನಿಸಿದರು.




 

Share this Story:

Follow Webdunia kannada