Select Your Language

Notifications

webdunia
webdunia
webdunia
webdunia

ಬೆಂಗಳೂರು: ನಿಲ್ಲದ ಕಾಮುಕರ ಅಟ್ಟಹಾಸ

ಬೆಂಗಳೂರು: ನಿಲ್ಲದ ಕಾಮುಕರ ಅಟ್ಟಹಾಸ
ಬೆಂಗಳೂರು , ಮಂಗಳವಾರ, 29 ಜುಲೈ 2014 (08:30 IST)
ಇಷ್ಟೆಲ್ಲಾ ಪ್ರತಿಭಟನೆ, ವಿರೋಧಗಳು ನಡೆದರೂ ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ದಾಖಲಾಗುತ್ತಿರುವುದು ತೀವೃ ಆತಂಕವನ್ನು ಬೆಳೆಸುತ್ತಿದೆ. ದಿನ ಪ್ರತಿದಿನವೆಂಬಂತೆ ಕೀಚಕ ಕೃತ್ಯಗಳು ವರದಿಯಾಗುತ್ತಿದ್ದು, ನೆಲಮಂಗಲದ  ಮಾಚೋಹಳ್ಳಿ ಗೇಟ್ ಬಳಿ ಅಪ್ರಾಪ್ತ ಬಾಲಕಿಯ ಪಾಪಿ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

35 ವರ್ಷದ ಕಾಮುಕ 17 ವರ್ಷದ ಅಪ್ರಾಪ್ತೆಯ ಮೇಲೆ ದುಷ್ಕೃತ್ಯ ಎಸಗಿದ್ದು, ಈ ಕುರಿತು ಬಾಲಕಿ ದಾಬಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 
ಆರೋಪಿ ಗಂಗಬೈಲಯ್ಯ ಎಂಬಾತನನ್ನು ಬಂಧಿಸಿರುವ ಪೋಲಿಸರು ಆತನ ಮೇಲೆ ಐಪಿಸಿ ವಿಭಾಗ 366ಎ, 376494, ಪೋಕ್ಸೋ 4, 6 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada