Webdunia - Bharat's app for daily news and videos

Install App

ಮಾಯಾವತಿ, ಗಂಡೋ ಅಥವಾ ಹೆಣ್ಣೋ: ಬಿಜೆಪಿ ಲೇವಡಿ

Webdunia
ಸೋಮವಾರ, 24 ನವೆಂಬರ್ 2014 (16:08 IST)
ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ  'ಅವಳಾ' ಅಥವಾ 'ಅವನಾ' ಎಂದು ಗೊಂದಲ ಇದೆ ಎಂದು ಹೇಳುವ ಮೂಲಕ ಬಿಜೆಪಿ ವಕ್ತಾರೆ ಶೈನಾ ಎನ್.ಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಜೈಪುರ್‌ದಲ್ಲಿ ನಡೆದ ಉದ್ಯಮಿಗಳ ಸಂಸ್ಥೆ (ಇಒ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ ಮಾಯಾವತಿ ಗಂಡೋ ಅಥವಾ ಹೆಣ್ಣೋ ಎಂಬುದು ಕೂಡ ನನಗೆ ತಿಳಿದಿಲ್ಲ ಎಂದು ನಸುನಗುತ್ತ ಹೇಳಿದ ಅವರು  ಮಾಯಾವತಿ ರಾಜಕೀಯದಲ್ಲಿ ಮಹಿಳೆಯರ ಸ್ಥಿತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆಯ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದರು. 
 
ಅವರ ಆ ಮಾತಿಗೆ ವಿರೋಧ ವ್ಯಕ್ತಪಡಿಸಿದ ಉದ್ಯಮಿಗಳ 'ಸಂಸ್ಥೆ (ಇಒ) ಸದಸ್ಯ ಜಿತೇಂದ್ರ, ಮಹಿಳೆಯರು ರಾಜಕೀಯದಲ್ಲಿ ಯಾವಾಗಲೂ ಪ್ರಬಲವಾಗಿಯೇ ಇದ್ದಾರೆ. ಇಂದಿರಾ ಗಾಂಧಿ, ಜಯಲಲಿತಾ ಅಥವಾ ಮಾಯಾವತಿ ಇದಕ್ಕೆ ಉತ್ತಮ ಉದಾಹರಣೆ ಎಂದರು.
 
ಈ ಉದಾಹರಣೆಗೆ ಪ್ರತಿಕ್ರಿಯಿಸಿದ ಶೈನಾ ಇವು ಸಿಂಗಲ್ ಮಹಿಳೆಯರ ಉದಾಹರಣೆಗಳು ಎಂದು ಹೇಳಿದರು.
 
ಬಿಜೆಪಿ ವಕ್ತಾರರ ಪ್ರಕಾರ ರಾಜಕೀಯದಲ್ಲಿ ಸಮಾನವಾಗಿ ಭಾಗಿಯಾಗುವ ಸನ್ನಿವೇಶ ಸೃಷ್ಟಿಯಾಗುವವರೆಗೆ ಮಹಿಳೆಯರ ಹಕ್ಕಿನ ಬಗ್ಗೆ ಮಾತನಾಡುವುದು ಅರ್ಥಹೀನ ಎಂದು ಹೇಳಿದ್ದಾರೆ.
 
ರಾಜಕೀಯದಲ್ಲಿ ಮಹಿಳೆಯರ  ಭಾಗವಹಿಸುವಿಕೆ 33 ಪ್ರತಿಶತಕ್ಕಿಂತ ಕಡಿಮೆ ಇದೆ. ಮತ ಚಲಾಯಿಸುವ ಹೊಣೆ ಗಂಡು ಮತ್ತು ಹೆಣ್ಣಿಗೆ ಸಮಾನವಾಗಿ ಇರುವಾಗ ಚುನಾವಣೆಯಲ್ಲಿ ಸ್ಪರ್ಧಿಸಲು ಸಹ ಸಮಾನ ಅವಕಾಶ ನೀಡಬೇಕು. ಎಲ್ಲಿ ತಮ್ಮ ಪಕ್ಷದ ಗೆಲುವು ಅಸಾಧ್ಯ ಎಂದು ಅನ್ನಿಸುತ್ತದೆಯೋ ಅಲ್ಲಷ್ಟೇ ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments