Select Your Language

Notifications

webdunia
webdunia
webdunia
webdunia

ಬಾಬ್ರಿ ಮಸೀದಿ ಧ್ವಂಸದಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆ: ಪ್ರಣಬ್ ಮುಖರ್ಜಿ

ಬಾಬ್ರಿ ಮಸೀದಿ ಧ್ವಂಸದಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆ: ಪ್ರಣಬ್ ಮುಖರ್ಜಿ
ನವದೆಹಲಿ , ಗುರುವಾರ, 28 ಜನವರಿ 2016 (20:26 IST)
ಬಾಬ್ರಿ ಮಸೀದಿ ಧ್ವಂಸವನ್ನು ತಡೆಯದಿರುವುದು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಬಹುದೊಡ್ಡ ವೈಫಲ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ. 
 
1980 ರಿಂದ 1990ರ ವರೆಗಿನ ತಮ್ಮ ರಾಜಕೀಯ ಜೀವನದ ಮಹತ್ವದ ಘಟನೆಗಳನ್ನು ಮೆಲಕು ಹಾಕಿದ ಮುಖರ್ಜಿ, ಬಾಬ್ರಿ ಮಸೀದಿ ಧ್ವಂಸದಿಂದ ದೇಶ ಮತ್ತು ವಿದೇಶದಲ್ಲಿರುವ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಆಳವಾದ ಗಾಯದಿಂದ ಬಳಲುವಂತಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಕಳೆದ 1992ರ ಡಿಸೆಂಬರ್ 6 ರಂದು ನಾನು ಮುಂಬೈನಲ್ಲಿದ್ದೆ. ಮಾಜಿ ಸಚಿವ ಜೈರಾಮ್ ರಮೇಶ್ ಮತ್ತು ಯೋಜನಾ ಆಯೋಗದ ನನ್ನ ವಿಶೇಷ ಕರ್ತವ್ಯ ಅಧಿಕಾರಿ ನನಗೆ ದೂರವಾಣಿ ಕರೆ ಮಾಡಿ ಬಾಬ್ರಿ ಮಸೀದಿ ಧ್ವಂಸವಾದ ಬಗ್ಗೆ ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ. 
 
ನನಗೆ ನಂಬಲು ಸಾಧ್ಯವಾಗಲಿಲ್ಲ. ಬಾಬ್ರಿ ಮಸೀದಿ ಎಷ್ಟು ಧ್ವಂಸವಾಗಿದೆ ಎಂದು ಜೈರಾಮ್ ರಮೇಶ್‌ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳತೊಡಗಿದೆ. ಜೈರಾಮ್ ರಮೇಶ್ ಶಾಂತಚಿತ್ತದಿಂದ ನಡೆದ ಘಟನೆಗಳನ್ನು ವಿವರಿಸಿದರು. ನಾನು ಅದೇ ದಿನ ಸಂಜೆ ದೆಹಲಿಗೆ ಮರಳಬೇಕಾಗಿತ್ತು. ಆದಾಗಲೇ ಮುಂಬೈನಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಮಹಾರಾಷ್ಟ್ರ ಗೃಹ ಕಾರ್ಯದರ್ಶಿ ನನಗೆ ದೂರವಾಣಿ ಕರೆ ಮಾಡಿ ವಿಮಾನ ನಿಲ್ದಾಣಕ್ಕೆ ತೆರಳಲು ಪೈಲಟ್ ಕಾರು ಸಿದ್ದಗೊಳಿಸಿರುವುದಾಗಿ ತಿಳಿಸಿದರು. 
 
ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಕಾರು ಕಂಡುಬಂದಿತು. ನನಾನು ಕಾರು ನಿಲ್ಲಿಸಿ ನನ್ನ ಕಾರನ್ನು ಹಿಂಬಾಲಿಸುವಂತೆ ಕೋರಿದೆ. ಅವರಿಗೂ ಭದ್ರತೆಯ ಅವಶ್ಯಕತೆಯಿತ್ತು. ರಸ್ತೆಯ ಬದಿಗಳಲ್ಲಿ ಕಲ್ಲು ತೂರಾಟ ನಡೆದಿರುವುದು ನನ್ನ ಗಮನಕ್ಕೆ ಬಂದಿತ್ತು. ನಂತರ ಮಾರನೇ ದಿನ ಮುಂಬೈನ ಕೆಲ ಪ್ರದೇಶಗಳಲ್ಲಿ ಗಲಭೆ ನಡೆದಿರುವುದು ಪತ್ರಿಕೆಗಳಲ್ಲಿ ಬಂದಾಗ ಬಾಬ್ರಿ ಮಸೀದಿ ಧ್ವಂಸದ ವಿಕಾರ ಸ್ವರೂಪ ನನ್ನನ್ನು ಕಾಡತೊಡಗಿತ್ತು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೆನಪುಗಳನ್ನು ತೆರೆದಿಟ್ಟಿದ್ದಾರೆ.

Share this Story:

Follow Webdunia kannada