Webdunia - Bharat's app for daily news and videos

Install App

ನಾನು ಸನ್ಯಾಸಿ, ಸಚಿವನಾಗಲಾರೆ -ಬಾಬಾ ರಾಮದೇವ್

Webdunia
ಮಂಗಳವಾರ, 21 ಏಪ್ರಿಲ್ 2015 (16:27 IST)
ಹರಿಯಾಣಾ ಸರಕಾರ ಕ್ಯಾಬಿನೇಟ್ ಸಚಿವರಾಗುವಂತೆ ನೀಡಿದ್ದ ಆಫರ್‌ನ್ನು ತಿರಸ್ಕರಿಸಿರುವ ಯೋಗಗುರು ರಾಮದೇವ್ ತಾನೊಬ್ಬ ಸನ್ಯಾಸಿಯಾಗಿಯೇ ಇರಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾರೆ. 


 
ಪತ್ರಕರ್ತರ ಜತೆ ಮಾತನಾಡಿದ ಬಾಬಾ, ಸನ್ಯಾಸಿ ಅಪಮಾನ, ಗೌರವ ಮತ್ತು ರಾಜಕೀಯಗಳನ್ನು ಮೀರಿದವನು ಎಂದರು. ಈ ಸಂದರ್ಭದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರ ಜತೆಗಿದ್ದರು. 
 
ತಾನು ಸೇವೆಗಾಗಿ ಬದುಕುವವನು ಎಂದ ಬಾಬಾ, ಯೋಗ ಮತ್ತು ಆಯುರ್ವೇದವನ್ನು ಪ್ರಸಾರ ಮಾಡಲು ಹರಿಯಾಣಾ ಸರ್ಕಾರ ಸೂಚಿಸಿದರೆ ಆ ನಿಟ್ಟಿನಲ್ಲಿ ಶ್ರಮಿಸುವುದಾಗಿ ವಾಗ್ದಾನ ಮಾಡಿದರು. 
 
"ಕ್ಯಾಬಿನೇಟ್ ಸಚಿವನಾಗುವಂತೆ ನೀಡಿದ ಆಫರ್‌ನ್ನು ನಾನು ನಯವಾಗಿ ತಿರಸ್ಕರಿಸುತ್ತಿದ್ದೇನೆ", ಎಂದವರು ಹೇಳಿದರು. 
 
ಯೋಗ ಮತ್ತು ಆಯುರ್ವೇದವನ್ನು ಪ್ರಸಾರ ಮಾಡುವ ಉದ್ದೇಶದಿಂದ ಬಾಬಾರವರನ್ನು ಹರಿಯಾಣಾದ ಬ್ರಾಂಡ್ ಅಂಬಾಸಿಡರ್ ಆಗಿ ಈ ಹಿಂದೆಯೇ ನೇಮಿಸಲಾಗಿದೆ. ಈಗ ಅವರನ್ನು ಕ್ಯಾಬಿನೇಟ್ ದರ್ಜೆ ಸಚಿವರಾಗಿಸುವುದಾಗಿ ಹರಿಯಾಣಾ ಸರ್ಕಾರ ಘೋಷಿಸಿತ್ತು. ಆದರೆ ಬಾಬಾ ಅದನ್ನು ಸವಿನಯದಿಂದ ತಿರಸ್ಕರಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments