ಬಾಬಾ ದಂಗಲ್: ಒಲಿಂಪಿಕ್ ವಿಜೇತನಿಗೆ ಮಣ್ಣು ಮುಕ್ಕಿಸಿದ ರಾಮದೇವ್ (ವಿಡಿಯೋ)

Webdunia
ಗುರುವಾರ, 19 ಜನವರಿ 2017 (09:25 IST)
ಯೋಗ ಗುರು ಬಾಬಾ ರಾಮದೇವ್ ಅವರ ದಂಗಲ್ ಕಥೆ ಇದು. ಯೋಗದ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ಒಲಿಂಪಿಕ್ ವಿಜೇತ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್‍ ಅವರಿಗೆ ಮಣ್ಣುಮುಕ್ಕಿಸಿದ್ದಾರೆ. 

 
2008 ಇಸವಿಯಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಯ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಪರಾಭವಗೊಳಿಸಿದ್ದ ಉಕ್ರೇನ್‌ನ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್‍ ಅವರಿಗೆ ತನ್ನ ಜತೆ ಸೆಣಸಾಡುವಂತೆ ಯೋಗ ಗುರು ಚಾಲೆಂಜ್ ಮಾಡಿದ್ದರು. ಬಾಬಾ ಸವಾಲಿಗೆ ಅಚ್ಚರಿ ವ್ಯಕ್ತ ಪಡಿಸಿದ್ದ ಆಂಡ್ರಿ ಈ ಸವಾಲನ್ನು ಸ್ವೀಕರಿಸಿ ಬಾಬಾ ಜತೆ ನಿನ್ನೆ ಕಣಕ್ಕಿಳಿದಿದ್ದರು. 
 
ಕುಸ್ತಿಗಿಳಿಯುವ ಮೊದಲುಸೂರ್ಯ ನಮಸ್ಕಾರ ಮಾಡಿದ ಬಾಬಾಗೆ ಆಂಡ್ರಿ ಸಾಟಿಯಾಗಲೇ ಇಲ್ಲ. ಆತನನ್ನು ಬಾಬಾ
12-0 ಅಂತರದಲ್ಲಿ ಹೀನಾಯವಾಗಿ ಸೋಲಿಸಿದರು. 
 
ಕೇಸರಿ ಚಡ್ಡಿ, ಕಪ್ಪು ಶೂ ಧರಿಸಿ ಕಣಕ್ಕಿಳಿದಿದ್ದ ಬಾಬಾ ಗೆಲುವಿನ ಬಳಿಕ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಕೂಗಿದರು. 
 
ಕುಸ್ತಿಪಟುಗಳಿಗೆ ಬಾಬಾ ರಾಮದೇವ್ ಚಾಲೆಂಜ್ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವದ ವೇಳೆ ರಾಮದೇವ್ ಅವರು ಸುಶೀಲ್ ಕುಮಾರ್‍ ಅವರಿಗೆ ಚಾಲೆಂಜ್ ಮಾಡಿದ್ದರು.

ಬಾಬಾ ದಂಗಲ್: ಒಲಿಂಪಿಕ್ ವಿಜೇತನಿಗೆ ಮಣ್ಣು ಮುಕ್ಕಿಸಿದ ರಾಮದೇವ್ (ವಿಡಿಯೋ)
 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments