Webdunia - Bharat's app for daily news and videos

Install App

'ಗುಜರಾತ್ ರಾವಣ'ನನ್ನು ದಹಿಸಿರಿ: ಮೋದಿಗೆ ಆಜಂ ಖಾನ್

Webdunia
ಶುಕ್ರವಾರ, 7 ಅಕ್ಟೋಬರ್ 2016 (19:04 IST)
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ಹರಿಹಾಯ್ದಿರುವ ಉತ್ತರ ಪ್ರದೇಶದ ಸಚಿವ ಆಜಂ ಖಾನ್ 'ಗುಜರಾತ್ ರಾವಣ'ನನ್ನು ದಹಿಸಿರಿ ಎಂದು ಮೋದಿ ಅವರಿಗೆ ಸಲಹೆ ನೀಡಿದ್ದಾರೆ. 

ಸಭೆಯೊಂದರಲ್ಲಿ ಮಾತನ್ನಾಡುತ್ತಿದ್ದ ಆಜಂ ಖಾನ್, ಲಕ್ನೋದಲ್ಲಿ ರಾವಣನನ್ನು ದಹಿಸುವ ಅಗತ್ಯವಿಲ್ಲವೆಂದು ನಾನು ಪ್ರಧಾನಿ ಮೋದಿ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಭಾರತದ ರಾಜಧಾನಿ ದೆಹಲಿ ಲಕ್ನೋ ಅಲ್ಲ. 1947ರ ಬಳಿಕ ಮಾನವೀಯತೆಯ ಹತ್ಯಾಕಾಂಡ ನಡೆದಿದೆ ಎಂದರೆ ಅದು ಗುಜರಾತ್‌ನಲ್ಲಿ.  ಮೋದಿ ರಾವಣನನ್ನು ದಹಿಸಬೇಕಂದಿದ್ದರೆ ಅದನ್ನವರು ಗುಜರಾತ್‌ನಲ್ಲಿ ಮಾಡಲಿ ಎಂದು ಅವರು ಹೇಳಿದ್ದಾರೆ. 
 
ಗುಜರಾತ್ ದಂಗೆ ಬಳಿಕವೂ ನಾವು ಮುಸ್ಲಿಮರ ಮತಗಳನ್ನು ಪಡೆದಿದ್ದೇವೆ ಎಂದು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳುತ್ತದೆ. ಆದರೆ ವಾಸ್ತವವಾಗಿ ತಾವು ದಂಗೆಯ ಸಮಯದಲ್ಲಿ ಮಾಡಿದ್ದನ್ನು ಹೇಳಿ ಬೆದರಿಸಿ ಮುಸ್ಲಿಂ ಸಮುದಾಯದವರಿಂದ ಮತ ಪಡೆಯಲಾಯಿತು  ಎಂದು ಖಾನ್ ಆರೋಪಿಸಿದ್ದಾರೆ. 
 
ದಸರಾ ನಿಮಿತ್ತ ಲಕ್ನೋದಲ್ಲಿ ನಡೆಯುವ ಐತಿಹಾಸಿಕ ಐಶ್‌ಭಾಗ್ ರಾಮಲೀಲಾದಲ್ಲಿ ಭಾಗವಹಿಸಲು ಮೋದಿ ಅವರು ಮುಂದಿನ ವಾರ ಲಕ್ನೋಗೆ ಭೇಟಿ ನೀಡಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಕಾಂಗ್ರೆಸ್ ಪ್ರಕಾರ ಕಾಶ್ಮೀರ ಪಾಕಿಸ್ತಾನ ಮ್ಯಾಪ್ ನಲ್ಲಿ: ಎಡವಟ್ಟು

India Pakistan: ಪಾಕಿಸ್ತಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಟ್ರಂಪ್ ಹೇಳುವುದು ಬೇಡ: ಪ್ರಧಾನಿ ಮೋದಿ

India Pakistan: ಭಾರತೀಯ ಸೇನೆಯಿಂದ ಮಧ್ಯಾಹ್ನ ಮಹತ್ವದ ಪತ್ರಿಕಾಗೋಷ್ಠಿ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

Share Market: ಕದನವಿರಾಮ ಬೆನ್ನಲ್ಲೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments