Webdunia - Bharat's app for daily news and videos

Install App

ಸರ್ಕಾರದ ಸ್ವಾಧೀನಕ್ಕಿಲ್ಲ ಅಯೋಧ್ಯಾ ಮಂಟಪ : ಹೈಕೋರ್ಟ್

Webdunia
ಬುಧವಾರ, 27 ಏಪ್ರಿಲ್ 2022 (08:24 IST)
ಚೆನ್ನೈ : ಅಯೋಧ್ಯಾ ಮಂಟಪವನ್ನು ಸ್ವಾಧೀನಪಡಿಸಲು ಹೊರಡಿಸಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

ಇಲ್ಲಿನ ಅಯೋಧ್ಯಾ ಮಂಟಪದ ವ್ಯವಹಾರಗಳನ್ನು ನಿರ್ವಹಿಸುವ ಶ್ರೀರಾಮ ಸಮಾಜದ ವಿರುದ್ಧ ಹಣಕಾಸಿನ ದುರುಪಯೋಗ, ತೆರಿಗೆ ವಂಚನೆ ಮತ್ತು ಇತರ ಅಕ್ರಮಗಳು ನಡೆದಿದೆ ಎನ್ನುವ ಬಗ್ಗೆ ಅನೇಕ ದೂರುಗಳನ್ನು ನ್ಯಾಯಾಲಯ ಸ್ವೀಕರಿಸಿತ್ತು ನಂತರ, ಮಂಟಪದ ಆಡಳಿತವನ್ನು ನಿರ್ವಹಿಸಲು ತಮಿಳುನಾಡು ಸರ್ಕಾರವು ಸೂಕ್ತ ವ್ಯಕ್ತಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. 

ಸದ್ಯ ನ್ಯಾಯಾಲಯವು ಈ ಆರೋಪಗಳ ಬಗ್ಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ತನಿಖೆ ನಡೆಸಲು ಪೂರ್ಣ ಸ್ವಾತಂತ್ರ್ಯ ನೀಡಿದೆ. ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯವು ಮಂಟಪದ ಸಂಪೂರ್ಣ ನಿಯಂತ್ರಣ ಶ್ರೀರಾಮ ಸಮಾಜಕ್ಕೆ ನೀಡಿದೆ. ಈ ಬಗ್ಗೆ ಬುಧವಾರ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ

ಏಪ್ರಿಲ್ 12 ರಂದು, ಪಶ್ಚಿಮ ಮಾಂಬಲಮ್ನಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಾಗ ಅಯೋಧ್ಯಾ ಮಂಟಪದ ಹೊರಗೆ ಗದ್ದಲ ಉಂಟಾಯಿತು.

ಇಲಾಖೆಯ ಕ್ರಮದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಅಲ್ಲಿ ಯಾವುದೇ ಭಜನೆ ಅಥವಾ ಸತ್ಸಂಗ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದರು.

ಶ್ರೀರಾಮ ಸಮಾಜದ ವಿರುದ್ಧ ಹಣ ದುರುಪಯೋಗದ ಬಗ್ಗೆ ದೂರುಗಳು ಬಂದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಸ್ಪಷ್ಟಪಡಿಸಿದ್ದರು. ಅಯೋಧ್ಯಾ ಮಂಟಪವು ಸಾರ್ವಜನಿಕ ದೇವಾಲಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

ಮುಂದಿನ ಸುದ್ದಿ
Show comments