ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಇಂದು ಅಯೋಧ್ಯೆ ಕೇಸು ವಿಚಾರಣೆ

Webdunia
ಬುಧವಾರ, 24 ಮೇ 2017 (09:48 IST)
ನವದೆಹಲಿ: 1992 ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಸಿಬಿಐನ ವಿಶೇಷ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.

 
ಸೋಮವಾರ ಆರು ಮಂದಿ ಆಪಾದಿತರ ಪೈಕಿ ಸತೀಶ್ ಪ್ರಧಾನ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು. ಮಂಗಳವಾರ ನ್ಯಾಯಾಧೀಶರು ಅಲಭ್ಯರಾಗಿದ್ದರಿಂದ ವಿಚಾರಣೆ ನಡೆಯಲಿಲ್ಲ.

ಆರು ಮಂದಿ ಆಪಾದಿತರಲ್ಲದೆ, ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ,  ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ವಿರುದ್ಧವೂ ವಿಚಾರಣೆ ನಡೆಯಲಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಈ ಮೂವರನ್ನೂ ವಿಚಾರಣೆಗೊಳಪಡಿಸುವಂತೆ ಆದೇಶ ನೀಡಿತ್ತು.

ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಸಿಬಿಐ ನ್ಯಾಯಾಲಯ ಮೇ 20 ರಿಂದ ಹಂತ ಹಂತದ ವಿಚಾರಣೆ ಆರಂಭಿಸಿತ್ತು. ಶೀಘ್ರವೇ ವಿಚಾರಣೆ ಮುಗಿಸಿ ಎರಡು ವರ್ಷದೊಳಗೆ ತೀರ್ಪು ಹೊರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದಲ್ಲಿ ಈ ಜಿಲ್ಲೆಗೆ ಇಂದು ಭಾರೀ ಮಳೆ ಸೂಚನೆ

ರಾಜ್ಯದಲ್ಲಿ ಬರಗಾಲ ತೀವ್ರಗೊಳ್ಳುತ್ತಿದ್ದ ಹಾಗೇ ಸರ್ಕಾರಕ್ಕೆ ಆಗ್ರಹ ಮಾಡಿದ ಯಡಿಯೂರಪ್ಪ

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಲಾಭ, ಇದಕ್ಕೆ ವಿರೋಧ ಸರಿಯಲ್ಲ: ಈಶ್ವರ್ ಖಂಡ್ರೆ

ನಾಲ್ಕು ವರ್ಷದ ಬಾಲಕಿ ರೇಪ್ ಆ್ಯಂಡ್ ಮರ್ಡರ್‌: ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ, ಆಗಿದ್ದೇನು ಗೊತ್ತಾ

ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮಗೆ ಕೊನೆಯ ವಿದಾಯ, ಅಂತ್ಯಕ್ರಿಯೆ ವಿಧಿವಿಧಾನ ನಡೆಸಿದ್ದು ಯಾರು ಗೊತ್ತಾ

ಮುಂದಿನ ಸುದ್ದಿ
Show comments