Select Your Language

Notifications

webdunia
webdunia
webdunia
webdunia

ಇಬ್ಬರು ರಷ್ಯಾದ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ:ಅಟೋ ಚಾಲಕನ ಬಂಧನ

ಇಬ್ಬರು ರಷ್ಯಾದ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ:ಅಟೋ ಚಾಲಕನ ಬಂಧನ
ತಿರುವನಂತಪುರಂ , ಬುಧವಾರ, 27 ಜನವರಿ 2016 (16:29 IST)
ಇಬ್ಬರು ರಷ್ಯಾದ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅಟೋರಿಕ್ಷಾ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಳೆದ ಜನೆವರಿ 22 ರಂದು ಅಟೋ ಚಾಲಕ ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೇ ಹಲ್ಲೆ ಮಾಡಿದ್ದಾನೆ ಎಂದು ರಷ್ಯಾ ದೇಶದ ಮಹಿಳಾ ಪ್ರವಾಸಿಗರು ಕೇರಳ ಮಹಿಳಾ ಆಯೋಗದ ಮುಂದೆ ದೂರು ದಾಖಲಿಸಿದ್ದಾರೆ.
 
ರಷ್ಯಾದ ಸೈಬೇರಿಯಾ ಮೂಲದ ಮಹಿಳಾ ಪ್ರವಾಸಿಗರಾದ ಐರೆನಾ ಝೈಕಿನಾ ಮತ್ತು ನಟಾಲಿಯಾ ಅಟೋರಿಕ್ಷಾವೊಂದನ್ನು ಮೊದಲೇ ಬುಕ್ ಮಾಡಿದ್ದರು. ಆದರೆ, ಬುಕ್ ಮಾಡಿದ್ದ ಅಟೋ ರಿಕ್ಷಾ ಹತ್ತಲು ಹೋದಾಗ ಪ್ರವಾಸಿ ಮಹಿಳೆಯರ ಮೇಲೆ ರಿಕ್ಷಾ ಸ್ಟ್ಯಾಂಡ್‌ನಲ್ಲಿದ್ದ ಮತ್ತೊಬ್ಬ ಅಟೋ ಚಾಲಕ ಹಲ್ಲೆ ನಡೆಸಿ, ತಮ್ಮನ್ನು ಕರೆದುಕೊಂಡು ಹೋಗಿ, ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. 
 
ಆರೋಪಿ ಅಟೋರಿಕ್ಷಾ ಚಾಲಕ ಜಲಾಲುದ್ದೀನ್ ಎಂದು ಗುರುತಿಸಲಾಗಿದ್ದು, ವರ್ಕಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕೇರಳ ಮಹಿಳಾ ಆಯೋಗದ ಸದಸ್ಯರು ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ಕೂಡಲೇ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. 
 

Share this Story:

Follow Webdunia kannada