ಬೆಂಗಳೂರು: ಪತ್ನಿಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಟೆಕಿ ಅತುಲ್ ಸುಭಾಷ್ ತಂದೆ ತಮ್ಮ ಮೊಮ್ಮಗ ಬದುಕಿರುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಅತುಲ್-ನಿಖಿತಾಗೆ ನಾಲ್ಕೂವರೆ ವರ್ಷದ ಮಗನಿದ್ದಾನೆ. ಆದರೆ ನಿಖಿತಾ ತನ್ನ ಮಗನನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಸ್ವತಃ ಅತುಲ್ 2021 ರಲ್ಲಿ ಕೊನೆಯ ಬಾರಿಗೆ ಮಗನ ಮುಖ ನೋಡಿದ್ದನಂತೆ. ಆತನ ಮುಖ ಹೇಗಿದೆ ಎಂಬುದೇ ನನಗೆ ಮರೆತು ಹೋಗಿದೆ ಎಂದು ಅತುಲ್ ಸಾಯುವ ಮೊದಲು ಮಾಡಿದ್ದ ವಿಡಿಯೋದಲ್ಲಿ ಹೇಳಿದ್ದ.
ಇದೀಗ ಅತುಲ್ ತಂದೆ ತಮ್ಮ ಮೊಮ್ಮಗ ಬದುಕಿದ್ದಾನೋ ಇಲ್ಲವೋ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಯಾವತ್ತೋ ಒಮ್ಮೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಿದೆ. ಆದರೆ ಇತ್ತೀಚೆಗೆ ಎಲ್ಲೂ ನೋಡಿರಲಿಲ್ಲ.
ಆತ ಬದುಕಿದ್ದಾನೋ, ಸತ್ತಿದ್ದಾನೋ ಎಂಬುದೇ ನಮಗೆ ಅನುಮಾನವಾಗಿದೆ ಎಂದಿದ್ದಾರೆ. ಆತ ಬದುಕಿದ್ದರೆ ನಮ್ಮ ಮಗನ ಕೊನೆಯ ಆಸೆಯಂತೆ ಅವನನ್ನು ನಮಗೆ ಒಪ್ಪಿಸಿ. ನಾವು ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಅತುಲ್ ತಂದೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ.