Webdunia - Bharat's app for daily news and videos

Install App

ಭಾರತವನ್ನು ಹಿಂದು ರಾಷ್ಟ್ರವಾಗಿ ಪರಿವರ್ತಿಸುವ ಹುನ್ನಾರ ನಡೆದಿದೆ: ಶರದ್ ಪವಾರ್

Webdunia
ಶುಕ್ರವಾರ, 5 ಫೆಬ್ರವರಿ 2016 (20:29 IST)
ಶಾಲಾ ಪಠ್ಯಗಳಲ್ಲಿರುವ ಇತಿಹಾಸವನ್ನು ನಾಶಗೊಳಿಸಿ ಭಾರತ ದೇಶವನ್ನು ಹಿಂದು ರಾಷ್ಟ್ರವಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
 
ಕೆಲ ವ್ಯಕ್ತಿಗಳು ಶಾಲಾಪುಸ್ತಕಗಳಲ್ಲಿರುವ ಇತಿಹಾಸವನ್ನು ತಿರುಚಿ ಹಿಂದು ರಾಷ್ಟ್ರವಾಗಿ ಬದಲಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಇಂತಹ ಪ್ರಯತ್ನಗಳು ದೇಶದ ಜಾತ್ಯಾತೀತ ನಿಲುವಿಗೆ ಧಕ್ಕೆ ತರಲಿರುವುದರಿಂದ ತುಂಬಾ ಅಪಾಯಕಾರಿಯಾಗಲಿದೆ ಎಂದು ವೈ.ಬಿ.ಚವ್ಹಾಣ್ ಕೇಂದ್ರದಲ್ಲಿ ಆಯೋಜಿಸಲಾದ ಸೆಮಿನಾರ್‌ನಲ್ಲಿ ತಿಳಿಸಿದ್ದಾರೆ.
 
ದೇಶದ ಯುವಕರಿಗೆ ಹಿಂದು ರಾಷ್ಟ್ರದ ಭ್ರಮೆಯನ್ನು ಹೊತ್ತಿಸಿ ಸಮಾಜವಾದಿ ವಿಷ ಹರಡಿಸಲು ಕೆಲ ಸಂಘಟನೆಗಳು ಪ್ರಯತ್ನ ನಡೆಸಿವೆ. ಇಂತಹ ಕೃತ್ಯಗಳನ್ನು ತಡೆಯಲು ಚರ್ಚಾ ವೇದಿಕೆ ಮತ್ತು ಲೇಖನಗಳನ್ನು ಹೊರತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಕೆಲ ಸಂಘಟನೆಗಳು ಶಿವಾಜಿ ಮಹಾರಾಜ್ ಮುಸ್ಲಿಂ ವಿರೋಧಿ ಎನ್ನುವ ವದಂತಿಗಳನ್ನು ಹರಡಿಸುತ್ತಿವೆ. ಆದರೆ, ವಾಸ್ತವ ಸಂಗತಿಯೆಂದರೆ, ಶಿವಾಜಿ ಮಹಾರಾಜ್, ಮುಸ್ಲಿಮರಿಗೆ ತಮ್ಮ ಸೇನೆಯಲ್ಲಿ ಮಹತ್ವದ ಸ್ಥಾನಗಳನ್ನು ನೀಡಿದ್ದರು. ಇಂತಹ ದ್ವೇಷ ಭಾವನೆಗಳನ್ನು ಹರಡಿಸುವುದು ಜಾತ್ಯಾತೀತವಾದಕ್ಕೆ ಮತ್ತು ದೇಶದ ಏಕತೆಗೆ ಧಕ್ಕೆ ತರಲಿದೆ ಎಂದರು.
 
ಇಂತಹ ದ್ವೇಷದ ವಾತಾವರಣ ತಡೆಯಲು ಇತಿಹಾಸಕಾರರು ಒಂದುಗೂಡಿ, ನಿರಂತರವಾಗಿ ಪರಸ್ಪರ ಚರ್ಚಿಸಿ ಸತ್ಯವನ್ನು ಬಹಿರಂಗಪಡಿಸಿ ನಿಜವಾದ ಇತಿಹಾಸವನ್ನು ದೇಶದ ಜನತೆಯ ಮುಂದಿಡಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೋರಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments