Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಶಾಲೆ ಮೇಲೆ ಉಗ್ರರ ದಾಳಿ: 2 ನಿಮಿಷ ಮೌನಾಚರಣೆಗೆ ಮೋದಿ ಕರೆ

ಪಾಕಿಸ್ತಾನ ಶಾಲೆ ಮೇಲೆ ಉಗ್ರರ ದಾಳಿ: 2 ನಿಮಿಷ ಮೌನಾಚರಣೆಗೆ ಮೋದಿ ಕರೆ
ಪಾಕಿಸ್ತಾನ , ಬುಧವಾರ, 17 ಡಿಸೆಂಬರ್ 2014 (09:29 IST)
ನಿನ್ನೆ ಇಲ್ಲಿನ ಪೇಶಾವರದಲ್ಲಿ ಸೈನಿಕ ಶಾಲೆಯೊಂದರ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು 130 ಮಕ್ಕಳನ್ನೂ ಸೇರಿದಂತೆ ಒಟ್ಟು 151
ಮಂದಿಯನ್ನು ಹತ್ಯೆಗೈದಿದ್ದ ಘಟನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದು, ರಾಷ್ಟ್ರಾದ್ಯಂತ ಇರುವ ಎಲ್ಲಾ ಶಾಲೆಗಳಲ್ಲಿ 2 ನಿಮಿಷಗಳ ಕಾಲ ಮೌನಾಚರಣೆ ಆಚರಿಸುವಂತೆ ನಿರ್ದೇಶಿಸಿದ್ದಾರೆ.  
 
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಇದು ಒಂದು ಅಮಾನುಷ ಘಟನೆ, ಅಲ್ಲದೆ ಇದು ಹೇಡಿಗಳು ಎಸಗುವ ಕೃತ್ಯ ಎಂದಿದ್ದಾರೆ. ಘಟನೆ ಬಳಿಕ ಪ್ರಧಾನಿ ಷರೀಫ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಮೋದಿ, ಪಾಕಿಸ್ತಾನಕ್ಕೆ ಉಗ್ರರನ್ನು ಸದೆ ಬಡಿಯಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡಲು ಭಾರತ ಸಿದ್ದವಿದೆ. ಅಗತ್ಯವೆನಿಸಿದಲ್ಲಿ ನಿಸ್ಸಂಕೋಚವಾಗಿ ಕೇಳಬಹುದು ಎಂದಿದ್ದಾರೆ. ಇದೇ ವಿಷಯವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಪುನರಾವರ್ತನೆ ಮಾಡಿದ್ದಾರೆ ಎನ್ನಲಾಗಿದೆ. 
 
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಭಯೋತ್ಪಾದನಾ ಸಂಘಟನೆ, ನಮ್ಮ ಸಂಘಟನೆಯ ಕಾರ್ಯಾಕರ್ತರ ಮೇಲೆ ಪಾಕ್ ಸೈನಿಕರು ಕಾರ್ಯಾಚರಣೆ ನಡೆಸಿ ಹಲವು ಕಾರ್ಯಕರ್ತರನ್ನು ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ಈ ಕೈತ್ಯ ಎಸಗಲಾಗಿದೆ. ಆದರೆ ನಮ್ಮ ಕಾರ್ಯಕರ್ತರಿಗೆ ನಾವು ಮಕ್ಕಳನ್ನು ಸಾಯಿಸಿ ಎಂದು ಸೂಚಿಸಿರಲಿಲ್ಲ. ಬದಲಾಗಿ ಪ್ರೌಢಾವಸ್ಥೆಗೆ ಬಂದಿರುವವರನ್ನು ಕೊಲ್ಲಿ ಎಂದು ಸೂಚಿಸಿದ್ದೆವು. ಆದರೆ ಹಸುಗೂಸುಗಳನ್ನು ಹತ್ಯೆಗೈದಿದ್ದಾರೆ ಎಂದು ನಿನ್ನೆ ಸಂಜೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು. 
 
ಶಾಲೆಯ ಮೇಲೆ ಅಟ್ಟಹಾಸ ಮೆರೆದಿದ್ದ ಉಗ್ರರು ಶಾಲಾ ಪ್ರಾಂಶುಪಾಲೆ, ಶಿಕ್ಷಕಿ ಹಾಗೂ ಮಕ್ಕಳನ್ನೂ ಸೇರಿದಂತೆ ಒಟ್ಟು 151 ಮಂದಿಯನ್ನು ಹತ್ಯೆಗೈದಿದ್ದರು. ಈ ಘಟನೆ ಸಂಬಂಧ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ನಾಯಕರೂ ಕೂಡ ತೀವ್ರವಾಗಿ ಖಂಡಿಸಿದ್ದಾರೆ. 

Share this Story:

Follow Webdunia kannada