Select Your Language

Notifications

webdunia
webdunia
webdunia
webdunia

ನಮ್ಮದು ಸೂಟ್‌ಕೇಸ್ ಸರಕಾರವಂತೂ ಅಲ್ಲ; ಸೂಟ್-ಬೂಟ್ ಸರಕಾರವೆಂದ ರಾಹುಲ್‌ಗೆ ಬಿಜೆಪಿ ತಿರುಗೇಟು

ನಮ್ಮದು ಸೂಟ್‌ಕೇಸ್ ಸರಕಾರವಂತೂ ಅಲ್ಲ; ಸೂಟ್-ಬೂಟ್ ಸರಕಾರವೆಂದ ರಾಹುಲ್‌ಗೆ ಬಿಜೆಪಿ ತಿರುಗೇಟು
ನವದೆಹಲಿ , ಮಂಗಳವಾರ, 21 ಏಪ್ರಿಲ್ 2015 (18:07 IST)
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೂಟ್- ಬೂಟ್ ಸರ್ಕಾರವೆಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ನಮ್ಮದು ಕನಿಷ್ಠಪಕ್ಷ ಸೂಟ್‌ಕೇಸ್ ಸರಕಾರವಂತೂ ಅಲ್ಲ ಎಂಬುದಾಗಿ ಹೇಳಿದ್ದಾರೆ. 

ರಾಹುಲ್ ಸೋಮವಾರ ಲೋಕಸಭೆಯಲ್ಲಿ ಮಾಡಿರುವ ಟೀಕೆಗೆ ನಿಮ್ಮ ಪ್ರತಿಕ್ರಿಯೆಯೇನು ಎಂಬುದಾಗಿ ಅವರನ್ನು ಕೇಳಲಾಗಿ, "ನಮ್ಮದು ಸೂಟ್‌ಕೇಸ್ ಸರಕಾರವಂತೂ ಅಲ್ಲ", ಎಂದು ಪ್ರಸಾದ್, ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದರು. ಹಾಗೆಂದರೇನು ಎಂದು ಅವರು ವಿವರಿಸಲಿಲ್ಲ. ಆದರೆ 10 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರಕಾರ ಹಲವಾರು ಭೃಷ್ಟಾಚಾರದ ಆರೋಪಗಳನ್ನು ಹೊತ್ತಿದೆ ಎಂಬುದು ಅವರ ಮಾತಿನ ಒಳಾರ್ಥ ಎನ್ನಿಸದಿರಲಿಲ್ಲ. 
 
"ಸುಗ್ರಿವಾಜ್ಞೆಗಳನ್ನು ಕಾಂಗ್ರೆಸ್ ಸರಕಾರ ದೆವ್ವಗಳ ಗೃಂಥಗಳು ಎಂಬಂತೆ ಟೀಕಿಸುತ್ತದೆ. ಆದರೆ ಅವರ ಆಡಳಿತಾವಧಿಯಲ್ಲಿ ಸುಗ್ರಿವಾಜ್ಞೆಗಳನ್ನು ಹೊರಡಿಸಿರುವ ದಾಖಲೆ ಅತಿ ಹೀನಾಯವಾಗಿದೆ. ಅವರು 50 ವರ್ಷಗಳಲ್ಲಿ 456 ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದಾರೆ. ನೆಹರು ಮತ್ತು ಇಂದಿರಾ ಗಾಂಧಿಯವರ ಕಾಲದಲ್ಲಿಯೇ ತಲಾ 77 ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ", ಎಂದು  ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಲೇವಡಿ ಮಾಡಿದ್ದಾರೆ. 

Share this Story:

Follow Webdunia kannada