Webdunia - Bharat's app for daily news and videos

Install App

ಇಸ್ರೋ ಹೊಸ ಮೈಲಿಗಲ್ಲು: ಬಾನಂಗಳಕ್ಕೆ ಸೇರಿದ ಬಹು ನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹ

Webdunia
ಸೋಮವಾರ, 28 ಸೆಪ್ಟಂಬರ್ 2015 (10:29 IST)
ಇಸ್ರೋ ನಿರ್ಮಿತ ಬಹು ನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹವನ್ನು ಇಂದು ಮುಂಜಾನೆ 10 ಗಂಟೆಗೆ ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಇದರ ಜತೆಗೆ ವಿದೇಶದ 6 ಉಪಗ್ರಹಗಳನ್ನು ಸಹ ಬಾನಂಗಳಕ್ಕೆ ಸೇರಿಸುವಲ್ಲಿ ಇಸ್ರೋ ಸಫಲತೆ ಕಂಡಿದೆ. 

ಭಾರತದ ಮೊದಲ ಬ್ರಹ್ಮಾಂಡ ಶೋಧಕ ಉಪಗ್ರಹದೊಂದಿಗೆ ವಿದೇಶಗಳದ್ದೂ ಸೇರಿಸಿ ಒಟ್ಟು 7 ಉಪಗ್ರಹಗಳನ್ನು ಪಿಎಸ್‌ಎಲ್‌ವಿ- ಸಿ30 ರಾಕೆಟ್‌ ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಈ ಉಡ್ಡಯನ ಮಾಡಲಾಯಿತು. 
 
ಪಿಎಸ್‌ಎಲ್‌ವಿ- ಸಿ30 ರಾಕೆಟ್‌ ಆಸ್ಟ್ರೋಸ್ಯಾಟ್ ಜತೆಗೆ ಇಂಡೋನೇಷ್ಯಾ ಮತ್ತು ಕೆನಡಾದ ತಲಾ ಒಂದು ಉಪಗ್ರಹ ಮತ್ತು ಅಮೆರಿಕದ ನಾಲ್ಕು ಪುಟ್ಟ ಉಪಗ್ರಹಗಳನ್ನು ಹೊತ್ತೂಯ್ದಿದೆ. 2008ರಲ್ಲಿ ಇಸ್ರೋ ಗರಿಷ್ಠ 10 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು.  7 ಉಪಗ್ರಹಗಳನ್ನು ಉಡ್ಡಯನ ಮಾಡುತ್ತಿರುವುದು 3ನೇ ಬಾರಿ. ಇದರೊಂದಿಗೆ 51 ವಿದೇಶಿ ಉಪಗ್ರಹ ಉಡಾವಣೆಗೊಳಿಸಿದ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಿದೆ. ವಾಣಿಜ್ಯ ಉದ್ದೇಶದಿಂದ ಇಸ್ರೋ ಇದುವರೆಗೆ 19 ದೇಶಗಳ 45 ಉಪಗ್ರಹಗಳನ್ನು ಉಡ್ಡಯನ ಮಾಡಿದೆ. ಈ ಮೂಲಕ  640 ಕೋಟಿ ರೂ. ಆದಾಯ ಗಳಿಸಿದೆ. 2007ರಲ್ಲಿ ಇಸ್ರೋ ಮೊದಲ ಬಾರಿಗೆ ಇಟಲಿಯ ಉಪಗ್ರಹವೊಂದನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
 
1213 ಕೆಜಿ ತೂಕ ಹೊಂದಿರುವ ಆಸ್ಟ್ರೋಸ್ಯಾಟ್ ಭೂಮಿಯಿಂದ ಭೂಮಿಯಿಂದ 650 ಕೀಮೀ ದೂರದಲ್ಲಿ ನೆಲೆಯಾಗಿದೆ. 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿರುವ ಈ ಉಪಗ್ರಹ ಬಾಹ್ಯಾಕಾಶ ಸಂಶೋಧಣೆಗೆ ನೆರವು ನೀಡಲಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments