Select Your Language

Notifications

webdunia
webdunia
webdunia
webdunia

ಕಲಾಂ ಅಂತ್ಯಸಂಸ್ಕಾರದ ದಿನದಂದು ನೃತ್ಯ, ಗಾಲ್ಫ್‌ನಲ್ಲಿ ಬಿಜಿಯಾದ ಆಸ್ಸಾಂ ಸಿಎಂ ತರುಣ್ ಗೋಗೈ

ಕಲಾಂ ಅಂತ್ಯಸಂಸ್ಕಾರದ ದಿನದಂದು ನೃತ್ಯ, ಗಾಲ್ಫ್‌ನಲ್ಲಿ ಬಿಜಿಯಾದ ಆಸ್ಸಾಂ ಸಿಎಂ ತರುಣ್ ಗೋಗೈ
ಆಸ್ಸಾಂ , ಗುರುವಾರ, 30 ಜುಲೈ 2015 (15:01 IST)
ದೇಶಾದ್ಯಂತ ಮಾಜಿ ರಾಷ್ಟ್ರಪತಿಯವರ ಅಂತ್ಯಸಂಸ್ಕಾರದ ಶೋಕದಲ್ಲಿ ಮುಳುಗಿದ್ದರೆ ಮುಖ್ಯಮಂತ್ರಿ ತರುಣ್ ಗೋಗೈ ಗಾಲ್ಫ್ ಆಡುತ್ತಾ ನೃತ್ಯ ಮಾಡುತ್ತಿರುವ ಹೇಯ ಕೃತ್ಯ ಬಹಿರಂಗವಾಗಿದೆ.   
 
ಮುಖ್ಯಮಂತ್ರಿ ಗೋಗೈ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರೊಂದಿಗೆ ನೃತ್ಯ ಮಾಡುತ್ತಿರುವುದು, ಸ್ನೂಕರ್ ಆಡುತ್ತಾ ಕಾಲ ಕಳೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.  
 
ಮಾಜಿ ರಾಷ್ಟ್ರಪತಿ ಕಲಾಂ ನಿಧನಕ್ಕೆ ಭರತ ರಾಷ್ಟ್ರವೇ ಕಂಬನಿ ಮಿಡಿಯುತ್ತಿದ್ದರೆ ಆಸ್ಸಾಂ ಮುಖ್ಯಂಮಂತ್ರಿ ತರುಣ್ ಗೋಗೈ ಮಾತ್ರ ಸಂತಸದಲ್ಲಿ ಕಾಲ ಕಳೆಯುತ್ತಿದ್ದಾರೆ.
 
ದೆಹಲಿಯಲ್ಲಿ ಸುಡುಬಿಸಿಲಿನ ಮಧ್ಯೆಯೂ ಕಲಾಂ ಪಾರ್ಥಿವ ಶರೀರದ ದರ್ಶನಕ್ಕಾಗಿ ಜನತೆ ಹಲವಾರು ಗಂಟೆಗಳ ಕಾಲ ಸರದಿಯಲ್ಲಿ ನಿಂತಿರುವುದು ಕಂಡುಬಂದಿತ್ತು. ರಾಮೇಶ್ವರಂನಲ್ಲೂ ಕೂಡಾ ಇದೇ ರೀತಿಯಲ್ಲಿ ಸಾವಿರಾರು ಜನ ದರ್ಶನಕ್ಕಾಗಿ ಹಾತೊರೆದಿದ್ದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಕಲಾಂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. 
 

Share this Story:

Follow Webdunia kannada