Webdunia - Bharat's app for daily news and videos

Install App

ಕೊನೆಯುಸಿರೆಳೆದ ಖ್ಯಾತ ಗಾಯಕಿ ಆಶಾ ಭೋಸ್ಲೆ ಹಿರಿಯ ಪುತ್ರ

Webdunia
ಮಂಗಳವಾರ, 29 ಸೆಪ್ಟಂಬರ್ 2015 (11:21 IST)
ದೀರ್ಘಕಾಲದಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಗಾಯಕಿ ಆಶಾ ಭೋಸ್ಲೆಯವರ ಹಿರಿಯ ಪುತ್ರ ಹೇಮಂತ್‌ (66) ಸೋಮವಾರ ಕೊನೆಯುಸಿರೆಳೆದಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಅವರು ಸ್ಕಾಟ್ಲೆಂಡ್‌ನಲ್ಲಿದ್ದರು. 
ಕಾಕತಾಳೀಯವೆಂದರೆ, ಸೋಮವಾರವೇ ಆಶಾ ಸಹೋದರಿ ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 86 ನೇ ಹುಟ್ಟುಹಬ್ಬವಾಗಿದ್ದು, ಹೇಮಂತ್ ಮೃತರಾದ ಸುದ್ದಿ ತಿಳಿಯುತ್ತಿದ್ದಂತೆ ಭೋಸ್ಲೆ ಮತ್ತು ಮಂಗೇಶ್ಕರ್‌ ಕುಟುಂಬಗಳು ಹುಟ್ಟುಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದಾರೆ. 
 
ಬಹುಮುಖ ಪ್ರತಿಭೆಯ ಸಂಗೀತ ಸಂಯೋಜಕರಾಗಿದ್ದ ಹೇಮಂತ್‌ ಸುಮಾರು 15 ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 'ದಾಮಾದ್' ಚಿತ್ರದಲ್ಲಿ ಅವರು ಸಂಗೀತ ನೀಡಿದ್ದ 'ಜಾಗೆ ಜಾಗೆ ನೈನೋ ಮೇ' ಅವರಿಗೆ ಹೆಸರು ತಂದು ಕೊಟ್ಟಿತ್ತು. ಅಲ್ಲದೇ ಮರಾಠಿ ಭಾಷೆಯಲ್ಲಿ ಆಶಾ ಭೋಸ್ಲೆ ಹಾಡಿದ ಹಲವಾರು ಟಾಪ್‌ ಹಾಡುಗಳನ್ನು ಅವರು ಸಂಯೋಜನೆ ಮಾಡಿದ್ದಾರೆ. 
 
ಕಳೆದ 10 ವರ್ಷಗಳಿಂದೀಚೆ ತಾಯಿ ಮಗನ ಸಂಬಂಧ ಅಷ್ಟೊಂದು ಮಧುರವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಗಾಯಕಿ ಆಶಾ ಭೋಸ್ಲೆ ಜೀವನದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎದುರಾದ ಎರಡನೇ ದುರಂತ ಇದಾಗಿದೆ. 2012ರ ಅಕ್ಟೋಬರ್‌ ತಿಂಗಳಲ್ಲಿ ಅವರ ಪುತ್ರಿ ವರ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments