Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆಯತ್ತ ಓವೈಸಿ ಚಿತ್ತ

ಬಿಬಿಎಂಪಿ ಚುನಾವಣೆಯತ್ತ ಓವೈಸಿ ಚಿತ್ತ
ಬೆಂಗಳೂರು , ಸೋಮವಾರ, 4 ಮೇ 2015 (12:31 IST)
ಬೆಂಗಳೂರು ಮಹಾನಗರ ಪಾಲಿಕೆಗೆಗಾಗಿ ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಐಎಮ್ಐಎಮ್ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ. 

ಹೈದರಾಬಾದ್ ಮೂಲದ ಈ ಪಕ್ಷ ಇತ್ತೀಚಿಗೆ ನಡೆದ ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್‌ಗಾಗಿ ನಡೆದ ಚುನಾವಣೆಯಲ್ಲಿ ಸಹ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. 
 
ಭಾನುವಾರ ಮೈಸೂರಿಗೆ ಖಾಸಗಿ ಕೆಲಸದ ನಿಮಿತ್ತ ಭೇಟಿ ನೀಡಿದ್ದ ಅವರು ಬೆಂಗಳೂರು ನಗರಕ್ಕೆ ಬರದಂತೆ ತಮ್ಮ ಮೇಲೆ ನಿರ್ಬಂಧ ಹೇರಿರುವುದಕ್ಕೆ ಕಾಂಗ್ರೆಸ್ ಮತ್ತು ಕರ್ನಾಟಕ ಸರಕಾರದ ಮೇಲೆ ಕಿಡಿಕಾರಿದ್ದಾರೆ. 
 
"ಮಹಾರಾಷ್ಟ್ರದಲ್ಲಿ ಎಐಎಮ್ಐಎಮ್ ಪ್ರವರ್ಧಮಾನಕ್ಕೆ ಬರುತ್ತಿರುವುದು ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿದೆ. ಆದರೆ ಮಹಾರಾಷ್ಟ್ರದ ಸೋಲಿನಿಂದ ಕಾಂಗ್ರೆಸ್ ಯಾವ ಪಾಠವನ್ನು ಕಲಿತಿಲ್ಲ. ನಾನು ನನ್ನ ಮೇಲೆ ಹೇರಿರುವ ನಿರ್ಬಂಧದ ವಿರುದ್ಧದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ನಾನು ಸದನದಲ್ಲಿ ಮಾತನಾಡಬಹುದು. ಆದರೆ ಬೆಂಗಳೂರಿನ ರಸ್ತೆಗಳಲ್ಲಿ ಮಾತನಾಡುವ ಹಾಗಿಲ್ಲ. ಅವರು ನನ್ನ ಬಗ್ಗೆ ಭಯ ಹೊಂದಿದ್ದಾರೆ", ಎಂದು ಓವೈಸಿ ಕೈ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು "ಮುಸ್ಲಿಮರು ಮತ್ತು ದಲಿತರು ಬಡತನ, ಸ್ಕೂಲ್ ಡ್ರಾಪ್ ಔಟ್,  ಕಡಿಮೆ ಶಿಕ್ಷಣಮಟ್ಟ ಮತ್ತು ಸಾಮಾಜಿಕ ಭೇದಭಾವದಂತಹ  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಅವರಿಗಾಗಿ ಕೆಲಸ ಮಾಡಿದೆ ಎಂದಾದರೆ 2009 ಮತ್ತು 2014ರ ಚುನಾವಣೆಯಲ್ಲಿ ಕರ್ನಾಟಕದಿಂದ ಒಬ್ಬ ಮುಸ್ಲಿಂ ಅಭ್ಯರ್ಥಿ ಲೋಕಸಭೆಗೆ ಆಯ್ಕೆಯಾಗಿಲ್ಲವೇಕೆ? ಸದನಗಳಲ್ಲಿ ಎಷ್ಟು ಮುಸ್ಲಿಂ ಸಂಸದರಿದ್ದಾರೆ", ಎಂದು ಅವರು ಪ್ರಶ್ನಿಸಿದ್ದಾರೆ. 

Share this Story:

Follow Webdunia kannada