Select Your Language

Notifications

webdunia
webdunia
webdunia
webdunia

ಒಂದು ಕಡೆ ಸೈನಿಕರು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ಮಸೀದಿಯಲ್ಲಿ ಉಗ್ರರ ಶ್ಲಾಘನೆ

ಒಂದು ಕಡೆ ಸೈನಿಕರು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ಮಸೀದಿಯಲ್ಲಿ ಉಗ್ರರ ಶ್ಲಾಘನೆ
ಪಾಂಪೋರ್ , ಮಂಗಳವಾರ, 23 ಫೆಬ್ರವರಿ 2016 (17:11 IST)
ಸರಕಾರ ಕಟ್ಟಡದಲ್ಲಿ ಅಡಗಿದ್ದ ಉಗ್ರರ ವಿರುದ್ಧ ಸೇನಾಪಡೆಗಳು ಎನ್‌ಕೌಂಟರ್ ನಡೆಸುತ್ತಾ ಹುತಾತ್ಮರಾಗುತ್ತಿದ್ದರೆ, ಅದೇ ಪ್ರದೇಶದಲ್ಲಿರುವ ಮಸೀದಿಗಳ ಲೌಡ್ ಸ್ವೀಕರ್‌ನಲ್ಲಿ ಉಗ್ರರ ಪವಿತ್ರ ಯುದ್ಧವನ್ನು ಹೊಗಳಿದ ಹೇಯ ಘಟನೆ ವರದಿಯಾಗಿದೆ.
 
ಪಾಂಪೋರ್‌ನ ಫ್ರೆಸ್ತಾಬಲ್, ದ್ರಾಂಗ್‌ಬಲ್, ಕಡ್ಲಾಬಲ್ ಮತ್ತು ಸೆಂಪೋರಾ ಮಸೀದಿಗಳಲ್ಲಿ ಪಾಕಿಸ್ತಾನ ಜಿಂದಾಬಾದ್, ನಮಗೆ ಸ್ವಾತಂತ್ರ್ಯ ಬೇಕು, ಉಗ್ರರ ಪವಿತ್ರ ಹೋರಾಟ ಶ್ಲಾಘನೀಯ ಎನ್ನುವ ಘೋಷಣೆಗಳನ್ನು ಮಸೀದಿಗಳ ಲೌಡ್ ಸ್ಪೀಕರ್‌ನಿಂದ ಹೊರಹೊಮ್ಮಿಸಲಾಯಿತು. 
 
ಸರಕಾರಿ ಕಟ್ಟಡಲ್ಲಿ ಅಡಗಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನಾಪಡೆಗಳು ಅಣಿಯಾಗುತ್ತಿರುವಂತೆಯೇ ಸ್ಥಳೀಯ ಯುವಕರು ಸೇನಾಪಡೆಗಳಿಗೆ ತೀವ್ರ ಪ್ರತಿರೋಧವೊಡ್ಡಿ ಘರ್ಷಣೆಗೆ ಮುಂದಾದ ಘಟನೆಯೂ ನಡೆಯಿತು. 
 
ಆದರೆ, ಸೇನಾಪಡೆಗಳು ಸ್ಥಳೀಯ ಯುವಕರನ್ನು ಚದುರಿಸಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮುಂದಾದರು. ಶೆಲ್‌ಗಳನ್ನು ಸಿಡಿಸುವ ಮೂಲಕ ಜನರ ಗುಂಪು ಚದುರಿಸಲು ಸೇನಾಪಡೆಗಳು ಯತ್ನಿಸುತ್ತಿರುವಂತೆಯೇ ಆಕ್ರೋಶಗೊಂಡ ಸ್ಥಳೀಯ ಯುವಕರು ಸೇನಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದರು.
 
ಗುಪ್ತಚರ ಮೂಲಗಳ ಪ್ರಕಾರ, ಪೊಲೀಸರು ಮಸೀದಿಗಳಲ್ಲಿರುವ ಮೌಲ್ವಿಗಳಿಗೆ ಲೌಡ್‌ಸ್ಪೀಕರ್‌ನಿಂದ ಘೋಷಣೆಗಳನ್ನು ಹೊರಡಿಸಿದಂತೆ ತಾಕೀತು ಮಾಡಿದರು. ಪಾಕಿಸ್ತಾನ ಮೂಲದ ವಿಚ್ಚಿದ್ರಕಾರಿ ಶಕ್ತಿಗಳ ಕೃತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada