Webdunia - Bharat's app for daily news and videos

Install App

8 ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ ಲಲಿತ್ ಮೋದಿ; ಒಂದು ಕೂಡ ಅವರ ಹೆಸರಿನಲ್ಲಿಲ್ಲ !

Webdunia
ಗುರುವಾರ, 25 ಜೂನ್ 2015 (13:19 IST)
ದೇಶದ ರಾಜಕಾರಣದಲ್ಲಿ ಕೋಲಾಹಲ ಏಳಲು ಕಾರಣರಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕನಿಷ್ಠ 8 ಕ್ರೆಡಿಟ್ ಕಾರ್ಡ್​ಗಳನ್ನು ಬಳಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ವಿದೇಶದ ವಿವಿಧ ಬ್ಯಾಂಕ್‌ಗಳಿಂದ ಪಡೆಯಲಾಗಿದ್ದ​ ಈ ಕಾರ್ಡ್​​​​ಗಳಲ್ಲಿ ಯಾವುದು ಕೂಡ ಲಲಿತ್ ಅವರ ಹೆಸರಲ್ಲಿ ಇರಲಿಲ್ಲವೆಂಬುದು ಗಮನಾರ್ಹ ಸಂಗತಿ.

ಐದು ಕಾರ್ಡುಗಳು ಮೋದಿ ಭಾವಮೈದುನ ಸುರೇಶ್​ ಚೇಲ್​ರಾಮ್​ ಹೆಸರಲ್ಲಿದ್ದರೆ, ಇನ್ನೆರಡು ಅವರ ಮಲಮಗಳು ಕರೀಮಾ  ಹೆಸರಿನಲ್ಲಿವೆ. 
 
ಏಪ್ರಿಲ್​ 2008ರಿಂದ ಮಾರ್ಚ್ 2011ರ ಅವಧಿಯಲ್ಲಿ, ಲಲಿತ್ ಬಿಸಿಸಿಐ ಮತ್ತು ಐಪಿಎಲ್ ಭಾಗವಾಗಿದ್ದಾಗ ಈ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾದ ಹಣಕಾಸು ವ್ಯವಹಾರಗಳ​ ವಿವರಣೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ಸೂಚಿಸಿದ್ದರು.  ಈ ಕ್ರೆಡಿಟ್ ಕಾರ್ಡ್‌ಗಳು ಯಾರ ಹೆಸರಲ್ಲಿವೆಯೋ ಅವರಿಗೆ ಮತ್ತು ಅವರ ಸ್ನೇಹಿತರಿಗೆ ವಿಮಾನದ ಟಿಕೆಟ್ ಮತ್ತು ಹೋಟೆಲ್ ಬುಕ್ ಮಾಡಲು ಇವುಗಳನ್ನು ಬಳಸಲಾಗಿತ್ತು ಎಂದು ಲಲಿತ್ ಸ್ಪಷ್ಟನೆ ನೀಡಿದ್ದರು. 
 
 ಅವರು ಲಂಡನ್‌ಗೆ ಪಲಾಯನ ಮಾಡಿದ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ನಿವಾಸಗಳಲ್ಲಿ ಮತ್ತು ಮೊಬೈಲ್ ಫೋನ್  ಪರಿಶೀಲನೆ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಈ ಕ್ರೆಡಿಟ್ ಕಾರ್ಡ್ ಕುರಿತ ಮಾಹಿತಿಯನ್ನು ಪಡೆದುಕೊಂಡಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments