Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್ ರಾಜೀನಾಮೆ ತಿರಸ್ಕಾರ: ಯಾದವ್ ಭೂಷಣ್‌ಗೆ ಕೊಕ್

ಅರವಿಂದ್ ಕೇಜ್ರಿವಾಲ್ ರಾಜೀನಾಮೆ ತಿರಸ್ಕಾರ: ಯಾದವ್ ಭೂಷಣ್‌ಗೆ ಕೊಕ್
ನವದೆಹಲಿ , ಬುಧವಾರ, 4 ಮಾರ್ಚ್ 2015 (18:56 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (Political Affairs Committee)ಯಿಂದ ಪಕ್ಷದ ಹಿರಿಯ ಮುಖಂಡರಾದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಗೆ ಕೋಕ್ ನೀಡಲಾಗಿದೆ.

ಆಪ್ ನಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸಲು ಪಕ್ಷದ ಮುಖಂಡರು ಮುಂದಾಗಿದ್ದು, ಇಂದು ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ನೇತೃತ್ವದಲ್ಲಿ ಆಪ್ ಪಕ್ಷ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ಪ್ರಸ್ತುತ ಸಭೆಯಲ್ಲಿ ಕೆಲ ರಾಜಿ ಸೂತ್ರಗಳನ್ನು ಮುಂದಿಡಲಾಗಿದೆ. ಅದರನ್ವಯ ಆಪ್ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯ ಸ್ಥಾನದಿಂದ ಈ ಇಬ್ಬರು ಬಂಡಾಯ ನಾಯಕರಿಗೆ ಕೋಕ್ ನೀಡಲಾಗಿದೆ.

ಅಂತೆಯೇ ಈ ಇಬ್ಬರು ನಾಯಕರಿಗೆ ಪಕ್ಷದಲ್ಲಿ ಹೊಸ ಜವಾಬ್ದಾರಿ ನೀಡಲಾಗಿದ್ದು, ಪ್ರಶಾಂತ್ ಭೂಷಣ್ ಅವರಿಗೆ ಜನಲೋಕಪಾಲ್ ಸಮಿತಿ ಮತ್ತು ಯೋಗೇಂದ್ರ ಯಾದವ್ ಅವರಿಗೆ ಕಿಸಾನ್ ಮೋರ್ಚಾ ಸಮಿತಿಯ ಜವಾಬ್ದಾರಿ ವಹಿಸಲಾಗಿದೆ. ಆದರೆ ಪ್ರಸ್ತುತ ಆಪ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿರುವ ಈ ರಾಜಿ ಸೂತ್ರವನ್ನು ಪ್ರಶಾಂತ್ ಮತ್ತು ಯೋಗೇಂದ್ರ ಯಾದವ್ ಅವರು ಒಪ್ಪಿಕೊಳ್ಳುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದೆ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಿಡಿಕಾರಿದ್ದ ಪ್ರಶಾಂತ್ ಭೂಷಣ್ ಅವರು, ಒಬ್ಬರಿಗೆ ಒಂದೇ ಜವಾಬ್ದಾರಿ ಅನ್ವಯ  ಕೇಜ್ರಿವಾಲ್ ಒಂದು ಹುದೆಯಲ್ಲಿ ಮಾತ್ರ ಮುಂದುವರೆಯಬೇಕು. ಹೀಗಾಗಿ ಕೇಜ್ರಿವಾಲ್ ಪಕ್ಷದ ಸಂಚಾಲಕ ಹುದ್ದೆಗೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

ಒಟ್ಟಾರೆ ಕಳೆದ ಹಲವು ದಿನಗಳಿಂದ ಆಪ್ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಬಂಡಾಯ ಇದೀಗ ನಿರ್ಣಾಯಕ ಸ್ಥಿತಿಗೆ ತಲುಪಿದ್ದು, ಪಕ್ಷದ ರಾಜಿ ಸೂತ್ರಕ್ಕೆ ಬಂಡಾಯ ನಾಯಕರು ಒಪ್ಪಿಗೆ ನೀಡುವರೇ ಅಥವಾ ತಮ್ಮ ಬಂಡಾಯವನ್ನು ಮುಂದುವರೆಸುವರೇ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada