Select Your Language

Notifications

webdunia
webdunia
webdunia
webdunia

ಪ್ರಧಾನಿ ನಿವಾಸದ ಬಳಿ ಚರಂಡಿ ಸ್ವಚ್ಛಗೊಳಿಸಿದ ಅರವಿಂದ್ ಕೇಜ್ರಿವಾಲ್

ಪ್ರಧಾನಿ ನಿವಾಸದ ಬಳಿ ಚರಂಡಿ ಸ್ವಚ್ಛಗೊಳಿಸಿದ ಅರವಿಂದ್ ಕೇಜ್ರಿವಾಲ್
ನವದೆಹಲಿ , ಗುರುವಾರ, 2 ಅಕ್ಟೋಬರ್ 2014 (17:22 IST)
ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಪ್ರಧಾನಿ ಮೋದಿ ನಿವಾಸದ ಹತ್ತಿರವಿರುವ ವಸತಿ ಪ್ರದೇಶದಲ್ಲಿನ ಚರಂಡಿಯೊಂದನ್ನು ಸ್ವಚ್ಛಗೊಳಿಸಲು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಝಾಡ್‌ಮಾಲಿಗಳಿಗೆ ಸಹಾಯ ಮಾಡಿದರು. 

ತಮ್ಮ ಸ್ವಚ್ಛತಾ ಕಾರ್ಯಕ್ಕೆ ಕಡಿಮೆ ಆದಾಯದ ಪ್ರದೇಶ ಎಂದು ಕರೆಯಲಾಗುವ ದೆಹಲಿಯ ಬಿ. ಆರ್. ಕ್ಯಾಂಪ್‌ನ್ನು ಆಯ್ದುಕೊಂಡ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ಪ್ರಧಾನಿ ಮೋದಿ ಕ್ಲೀನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದ ದಿನದಂದೇ ತಾವು ಕಡೆ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊಂಡರು. 
 
ನಗರಸಭೆಯ ಹಲವಾರು ನೌಕರರು ಈ ಸಂದರ್ಭದಲ್ಲಿ ಕೇಜ್ರಿವಾಲ್ ಅವರಿಗೆ ಸಾಥ್ ನೀಡಿದರು. ನಂತರ ಆಪ್ ನಾಯಕ ಅವರೊಂದಿಗೆ ಚಹಾ ಸೇವನೆ ಮಾಡಿದರು ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ಹೇಳಿದ್ದಾರೆ. 
 
ಬಿಆರ್ ಕ್ಯಾಂಪ್ ಕೇಜ್ರಿವಾಲ್ ಅವರ ದೆಹಲಿ ವಿಧಾನಸಭಾ ಕ್ಷೇತ್ರದಡಿ ಬರುತ್ತದೆ. 
 
ಸ್ವಚ್ಛ ಭಾರತ ನಿರ್ಮಾಣದ ಗುರಿಯಲ್ಲಿ ತಮ್ಮ ಬದ್ಧತೆಯನ್ನು ತೋರಿಸುವ ಉದ್ದೇಶದಿಂದ ಎಎಪಿ ಕಾರ್ಯಕರ್ತರು ಸಹ ರಾಜಧಾನಿಯ ಹಲವಾರು ಭಾಗಗಳಲ್ಲಿ ಕಸ ಗುಡಿಸಿದರು. ಆದರೆ ಅವರು ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲವರು ಪಾಲ್ಗೊಳ್ಳಲಿಲ್ಲ. 
 
"ತಮ್ಮ ಪಕ್ಷ ಅಕ್ಟೋಬರ್ 2ರಂದು ಸ್ವಚ್ಛತಾ ಕಾರ್ಯವನ್ನು ಆರಂಭಿಸುವುದಾಗಿ ಮತ್ತು ಎಲ್ಲಾ ಶಾಸಕರು ಹಾಗೂ ತಮ್ಮ ಪಕ್ಷದ ನಾಯಕರು ಝಾಡಮಾಲಿಗಳಿಗೆ ಅವರ ಕೆಲಸದಲ್ಲಿ ಸಹಾಯ ಮಾಡಲಿದ್ದಾರೆ" ಎಂದು ಆಪ್ ಟ್ವೀಟ್  ಮಾಡಿತ್ತು.

Share this Story:

Follow Webdunia kannada