Select Your Language

Notifications

webdunia
webdunia
webdunia
webdunia

ಜಮ್ಮು ಕಾಶ್ಮಿರದ ಪಂಪೋರ್‌ನಲ್ಲಿ ಎನ್‌ಕೌಂಟರ್ ಅಂತ್ಯ: ಮೂವರು ಉಗ್ರರು ಮಟಾಷ್

ಜಮ್ಮು ಕಾಶ್ಮಿರದ ಪಂಪೋರ್‌ನಲ್ಲಿ ಎನ್‌ಕೌಂಟರ್ ಅಂತ್ಯ: ಮೂವರು ಉಗ್ರರು ಮಟಾಷ್
ಜಮ್ಮು , ಸೋಮವಾರ, 22 ಫೆಬ್ರವರಿ 2016 (18:08 IST)
ಸರಕಾರಿ ಕಟ್ಟಡದಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಎನ್‌ಕೌಂಟರ್ ಅಂತ್ಯವಾಗಿದೆ ಎಂದು ಮೇಜರ್ ಜನರಲ್ ದತ್ತಾ ಘೋಷಿಸಿದ್ದಾರೆ.
 
ಕಾರ್ಯಾಚರಣೆ ವೇಲೆ 120 ನಾಗರಿಕರನ್ನು ರಕ್ಷಿಸಲಾಗಿದೆ. ಎಲ್ಲಾ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
 
ಉಗ್ರರ ವಿರುದ್ಧ ಹೋರಾಡಿದ ವೀರ ಯೋಧರು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಯೋಧರು ಪ್ರಶಂಸನಾರ್ಹರು ಎಂದರು. ಹತರಾದ ಉಗ್ರರು ಎಲ್‌ಇಟಿ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಶಂಕಿಸಲಾಗಿರುವುದಾಗಿ ಹೇಳಿದ್ದಾರೆ. 
 
ಮೂವರು ವಿದೇಶಿ ಮೂಲದವರಾಗಿದ್ದರು ಎಂದು ಸೇನಾಪಡೆಯ ಮೇಜರ್ ಜನರಲ್ ದತ್ತಾ ತಿಳಿಸಿದ್ದಾರೆ.

Share this Story:

Follow Webdunia kannada