Select Your Language

Notifications

webdunia
webdunia
webdunia
webdunia

ಸಾರ್ವಜನಿಕವಾಗಿ ಬಾಲಕಿ ಪ್ಯಾಂಟ್ ಬಿಚ್ಚಿಸಿದ ಸಂಸದ (ವಿಡಿಯೋ)

ಸಾರ್ವಜನಿಕವಾಗಿ ಬಾಲಕಿ ಪ್ಯಾಂಟ್ ಬಿಚ್ಚಿಸಿದ ಸಂಸದ (ವಿಡಿಯೋ)
ಉನ್ನಾವೋ , ಶುಕ್ರವಾರ, 6 ಮೇ 2016 (09:03 IST)
ಪದೇ ಪದೇ ವಿವಾದಕ್ಕೆ ಸಿಲುಕುವ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ನೂರಾರು ಜನರ ಮಧ್ಯದಲ್ಲಿಯೇ ಅವರು ಬಾಲಕಿಯೊಬ್ಬಳಿಗೆ ಪ್ಯಾಂಟ್ ಬಿಚ್ಚಲು ಹೇಳಿದ್ದಾರೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

ಈ ವಿಡಿಯೋದಲ್ಲಿರುವ ಪ್ರಕಾರ ಸಾಕ್ಷಿ ಮಹಾರಾಜ್ ಕೆಲ ಮಹಿಳೆಯರೊಂದಿಗೆ ಏನನ್ನೋ ಚರ್ಚಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಬಾಲಕಿಯೊಬ್ಬಳು ತನ್ನ ಮೇಲೆ ನಡೆದ ಪೊಲೀಸ್ ದೌರ್ಜನ್ಯವಾದ ಕುರಿತು ಹೇಳಿಕೊಂಡಿದ್ದಾಳೆ. ಅದಕ್ಕೆ ಮಹಾರಾಜ್ ಆಕೆಯ ಪ್ಯಾಂಟ್ ಬಿಚ್ಚಿ ಗಾಯ ತೋರಿಸುವಂತೆ ಹೇಳಿದ್ದಾರೆ. ಆ ಸಂದರ್ಭದಲ್ಲಿ ಪುರುಷರು ಸಹ ಸ್ಥಳದಲ್ಲಿದ್ದರು. 

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯಲ್ಲಿ ಸಾರ್ವಜನಿಕವಾಗಿ ಅಸಭ್ಯತೆ ತೋರಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ. 

ವಿಡಿಯೋ
 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಅತ್ಯಾಚಾರ ಪ್ರಕರಣ: ಬಾಲಕಿಯನ್ನು 50 ಲಕ್ಷಕ್ಕೆ ಖರೀದಿಸಿದ್ದನಂತೆ ಶಾಸಕ