Select Your Language

Notifications

webdunia
webdunia
webdunia
webdunia

ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟ್ ಮಾಡಿದ ಬಾಲಿವುಡ್ ನಟಿ ಅನುಷ್ಕಾ

ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟ್ ಮಾಡಿದ ಬಾಲಿವುಡ್ ನಟಿ ಅನುಷ್ಕಾ
ನವದೆಹಲಿ , ಮಂಗಳವಾರ, 28 ಜುಲೈ 2015 (18:59 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಎಪಿಜೆ ಅಬ್ದುಲ್ ಕಲಾಂ ಎನ್ನುವ ಬದಲಿಗೆ ಎಪಿಜೆ ಕಲಾಂ ಅಜಾದ್ ಎಂದು ತಪ್ಪು ಟ್ವೀಟ್ ಮಾಡಿದ್ದರಿಂದ ಭಾರಿ ಚರ್ಚೆಗೆ ತುತ್ತಾಗಿದ್ದಾರೆ. ಇತರರು ಆಕೆಯ ಟ್ವೀಟ್‌ಗೆ ಮನಬಂದಂತೆ ಟ್ವೀಟ್ ಮಾಡುತ್ತಿರುವುದರಿಂದ ಸಂದೇಶವನ್ನೇ ತೆಗೆದುಹಾಕಿದ್ದಾರೆ. 
 
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನ ಹೊಂದಿದ್ದರಿಂದ ದೇಶ ತುಂಬಲಾರದ ನಷ್ಟ ಅನುಭವಿಸುತ್ತಿದೆ. ದೇಶದ ಜನತೆ ಮೌನವಾಗಿ ಶೋಕಾಚರಣೆ ಮಾಡುತ್ತಿದ್ದರೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ತಮ್ಮ ಸಂತಾಪ ಸೂಚಕ ಮಾಹಿತಿಗಳನ್ನು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 
 
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎರಡನೇ ಬಾರಿಗೆ ಇಂತಹ ಸ್ಥಿತಿ ಎದುರಿಸುತ್ತಿದ್ದಾರೆ. ಕಲಾಂ ಅಭಿಮಾನಿಗಳ ಆಕ್ರೋಶದಿಂದ ಆತಂಕಗೊಂಡ ಅನುಷ್ಕಾ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
 
ಬಾಲಿವುಡ್ ಚಿತ್ರರಂಗದಲ್ಲಿಯೇ ಭಾರಿ ಗಳಿಕೆಯ ಪಿಕೆ ಚಿತ್ರದಲ್ಲಿ ನಟಿಸಿದ ಖ್ಯಾತ ನಟಿ ಅನುಷ್ಕಾ ಶರ್ಮಾ, ಕಲಾಂ ಹೆಸರನ್ನು ಸರಿಯಾಗಿ ಬರೆದು ಸಂತಾಪ ಸೂಚಿಸಿದ್ದಾರೆ.
 

Share this Story:

Follow Webdunia kannada