Select Your Language

Notifications

webdunia
webdunia
webdunia
webdunia

'ಲವ್ ಜಿಹಾದ್'‌ಗೆ ಪ್ರತ್ಯುತ್ತರ: "ಸೊಸೆ ತನ್ನಿ, ಮಗಳನ್ನು ಕಾಪಾಡಿ"

'ಲವ್ ಜಿಹಾದ್'‌ಗೆ ಪ್ರತ್ಯುತ್ತರ:
ನವದೆಹಲಿ , ಶನಿವಾರ, 27 ಡಿಸೆಂಬರ್ 2014 (12:37 IST)
ಧರ್ಮಪರಿವರ್ತನೆ ಕುರಿತಂತೆ ದೇಶಾದ್ಯಂತ ಎದ್ದಿರುವ ವಿವಾದದ ಬೆಂಕಿ ಶಮನವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅದಕ್ಕೆ ಪೂರಕವೆಂಬಂತೆ ಲವ್ ಜಿಹಾದ್‌ಗೆ ಪ್ರಬಲ ಪ್ರತ್ಯುತ್ತರ ನೀಡಲು ನಿರ್ಧರಿಸಿರುವ  ಭಜರಂಗ ದಳ  "ಸೊಸೆಯನ್ನು ತನ್ನಿ, ಮಗಳನ್ನು ಕಾಪಾಡಿ" ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಲು ತಯಾರಿ ನಡೆಸಿದೆ. ಈ ಅಭಿಯಾನ ಫೆಬ್ರವರಿ 17 ರಿಂದ ಪ್ರಾರಂಭವಾಗಲಿದೆ. 
ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯುವತಿಯರನ್ನು ವಿವಾಹವಾದ ಹಿಂದೂ ಯುವಕರನ್ನು ಈ ಅಭಿಯಾನದಡಿ ರಕ್ಷಿಸಲು ಭಜರಂಗ ದಳ ನಿರ್ಧರಿಸಿದೆ. ಅಲ್ಲದೇ ತಮ್ಮ ಹೆಣ್ಣು ಮಕ್ಕಳು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯುವಕರ ಜತೆ ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಳ್ಳದಿರುವಂತೆ ನೋಡಿಕೊಳ್ಳಲು ಹಿಂದೂ ಪರಿವಾರಗಳಲ್ಲಿ ಜಾಗೃತಿಯನ್ನು ಮೂಡಿಸಲು ಸಂಘಟನೆ ನಿರ್ಧರಿಸಿದೆ. 
 
ಭಜರಂಗ ದಳದ ಉತ್ತರಪ್ರದೇಶ್ ಸಂಚಾಲಕರಾದ ಅಜ್ಜು ಚೌಹಾನ್ ಅವರ ಪ್ರಕಾರ,  " 'ಸೊಸೆಯನ್ನು ತನ್ನಿ, ಮಗಳನ್ನು ಕಾಪಾಡಿ' ಎಂಬ  ಅಭಿಯಾನ, 'ಲವ್ ಜಿಹಾದ್'‌ಗೆ ಪ್ರತ್ಯುತ್ತರವಾಗಿದೆ. ಇದರಡಿಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಸೊಸೆಯರಾಗಿ ಸ್ವೀಕರಿಸಲಾಗುವುದು.  ಲವ್ ಜಿಹಾದ್‌ನಲ್ಲಿ ಹಿಂದೂಗಳಂಕೆ  ನಟಿಸಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೇಮ ಜಾಲದಲ್ಲಿ  ಸಿಲುಕಿಸುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ವಿವಿಧ ಸಂಘಟನೆಗಳು ಹಣ ಸಹಾಯವನ್ನು ಸಹ ನೀಡುತ್ತಿವೆ. ಆದರೆ ನಾವು ಜಾರಿಯಲ್ಲಿ ತರುವ ಅಭಿಯಾನದಲ್ಲಿ ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮೋಸ ಮಾಡುವುದಿಲ್ಲ . ಇತರ ಧರ್ಮದ ಯುವತಿಯರನ್ನು ಪ್ರೀತಿಸಿ ಎಂದು ಯುವಕರಿಗೆ ಹಣದ ಆಮಿಷವನ್ನು ಸಹ ಒಡ್ಡಲಾಗುವುದಿಲ್ಲ" . 

Share this Story:

Follow Webdunia kannada