Webdunia - Bharat's app for daily news and videos

Install App

ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ನನ್ನ ಗೆಳೆಯ : ಮೋದಿ

Webdunia
ಶುಕ್ರವಾರ, 2 ಮೇ 2014 (15:32 IST)
ಪ್ರಿಯಾಂಕಾ ನನ್ನ ಮಗಳಿದ್ದಂತೆ ಎಂದು ಮೋದಿ ಹೇಳಿದ್ದ ಮಾತಿಗೆ ಕತ್ತರಿ ಹಾಕಿದ್ದ ಸುದ್ದಿವಾಹಿನಿಯೊಂದು ಈಗ ಅವರ ಮತ್ತೊಂದು ಹೇಳಿಕೆಯನ್ನೂ ಸಹ ಕಟ್ ಮಾಡಿ ತೋರಿಸಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ನನ್ನ ಒಳ್ಳೆಯ ಸ್ನೇಹಿತರಾಗಿದ್ದರು, ಈಗ ಅವರು ನನ್ನ ಪೋನ್ ಕರೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಂದರ್ಶನದಲ್ಲಿ ಹೇಳಿದ್ದ ಭಾಗಕ್ಕೆ ದೂರದರ್ಶನ ಕತ್ತರಿ ಹಾಕಿದೆ. 
 
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮೋದಿ ಕಾಂಗ್ರೆಸ್ಸಿಗ "ಅಹಮದ್ ಭಾಯಿ ನನ್ನ ಉತ್ತಮ ಸ್ನೇಹಿತರಾಗಿದ್ದರು. ನಮ್ಮ ಸ್ನೇಹ ಸದಾ ಇರಲಿ ಎಂದು ನಾನು ಬಯಸಿದ್ದೆ. ಆದರೆ ಈಗ ನಮ್ಮ ಸಖ್ಯ ಉಳಿದುಕೊಂಡಿಲ್ಲ. ಈಗ ಅವರು ನನ್ನಿಂದ ದೂರ ಓಡುತ್ತಿದ್ದಾರೆ ಮತ್ತು ನನ್ನ ಪೋನ್ ಕರೆಯನ್ನು ಕೂಡ ಸ್ವೀಕರಿಸುತ್ತಿಲ್ಲ" ಎಂದು ಹೇಳಿದ್ದರು. 
 
ಇದಕ್ಕೆ ಪ್ರತಿಕ್ರಿಯಿಸಿರುವ ಅಹಮದ್ ನಾನು 1980ರಲ್ಲಿ ಒಮ್ಮೆ ಅವರ ಜತೆ ಊಟ ಮಾಡಿದ್ದು ಹೌದು. ಆದರೆ ಮೋದಿಯವರು 2001ರಲ್ಲಿ ಮುಖ್ಯಮಂತ್ರಿಯಾದಾಗಿನಿಂದ ನಾನವರ ಜತೆ ಒಂದು ಕಪ್ ಟೀಯನ್ನು ಸಹ ಕುಡಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕನ ವೆಬ್ಸೈಟ್‌ನಲ್ಲಿ ಸುದ್ದಿವಾಹಿನಿ ಮಾಡಿದ ಸಂದರ್ಶನದ ಪೂರ್ಣ ಭಾಗವನ್ನು ಪ್ರಕಟಿಸಲಾಗಿದೆ. ಆದರೆ ಸಂದರ್ಶನ ಮಾಡಿದ್ದ ಸುದ್ದಿವಾಹಿನಿ ಈ ಭಾಗಕ್ಕೆ ಕತ್ತರಿ ಹಾಕಿದೆ. 
 
ಗುಜರಾತ್ ಸರಕಾರದ ವತಿಯಿಂದ ಕೂಡ ಸಂದರ್ಶನವನ್ನು ರೆಕಾರ್ಡ್ ಮಾಡಿರಬಹುದಾದರಿಂದ ಈ ಮಾಹಿತಿ ಕೈಗೆಟುಕುವಂತಾಗಿದೆ. 56 ನಿಮಿಷಗಳ ವಿಡಿಯೋದಲ್ಲಿ ಕೇವಲ 20 ನಿಮಿಷದ ಸಂದರ್ಶನವನ್ನಷ್ಟೇ ಸುದ್ದಿವಾಹಿನಿ ಪ್ರಸಾರ ಮಾಡಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments