Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ, 10 ಜನರಿಗೆ ಗಾಯ

ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ, 10 ಜನರಿಗೆ ಗಾಯ
ಕ್ವೆಟ್ಟಾ , ಗುರುವಾರ, 11 ಆಗಸ್ಟ್ 2016 (17:35 IST)
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಮತ್ತೆ ಬಾಂಬ್ ಸ್ಪೋಟವಾಗಿದ್ದು 10 ಜನರು ಗಾಯಗೊಂಡಿದ್ದಾರೆ. ನಗರದ ಮುಖ್ಯ ರಸ್ತೆಯಲ್ಲಿ ನ್ಯಾಯಾಧೀಶರಿಗೆ ಬೆಂಗಾವಲಾಗಿದ್ದ ವಾಹನದ ಸಮೀಪ ರಸ್ತೆ ಬದಿಯಲ್ಲಿ ಬಾಂಬ್ ಸ್ಪೋಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 
ಅದೃಷ್ಟವಶಾತ್ ನ್ಯಾಯಾಧೀಶರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೈರುತ್ಯ ಬಲುಚಿಸ್ತಾನ್ ಪ್ರಾಂತ್ಯದ ಆಂತರಿಕ ಸಚಿವಾಲಯದ ಮುಖ್ಯಸ್ಥ ಸರ್ಫರಾಜ್ ಬುಗ್ತಿ ಸ್ಪಷ್ಟ ಪಡಿಸಿದ್ದಾರೆ.
 
ಘಟನೆಯಲ್ಲಿ ಪಾದಚಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ಪೊಲೀಸ್ ವಕ್ತಾರ ಶಹಜಾದ ಫರ್ಹತ್ ತಿಳಿಸಿದ್ದಾರೆ.
 
ಇಲ್ಲಿಯವರೆಗೆ ಯಾರು ಕೂಡ ಘಟನೆಯ ಜವಾಬ್ದಾರಿ ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ. 
 
4 ದಿನಗಳ ಹಿಂದೆ ಸಹ ಕ್ವೆಟ್ಟಾ ನಗರದಲ್ಲಿ  ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಸುಮಾರು 70 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಹೆಚ್ಚಿನವರು ವಕೀಲರಾಗಿದ್ದರು. 
 
ಕ್ವೆಟ್ಟಾ, ಬಲುಚಿಸ್ತಾನ ಪ್ರಾಂತ್ಯದ ರಾಜಧಾನಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನಾಚರಣೆಯಂದು ಬಿಗಿ ಭದ್ರತೆ ವಹಿಸಲು ಗೃಹ ಸಚಿವರ ಸೂಚನೆ