Select Your Language

Notifications

webdunia
webdunia
webdunia
webdunia

ರೈತರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ : ನರೇಂದ್ರ ಮೋದಿಗೆ ಅಣ್ಣಾ ಹಜಾರೆ ಒತ್ತಾಯ

ರೈತರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ : ನರೇಂದ್ರ ಮೋದಿಗೆ ಅಣ್ಣಾ ಹಜಾರೆ ಒತ್ತಾಯ
ನವದೆಹಲಿ , ಬುಧವಾರ, 1 ಏಪ್ರಿಲ್ 2015 (17:52 IST)
ಭೂಸುಧಾರಣಾ ಕಾಯಿದೆಗೆ ಎರಡನೇ ಬಾರಿ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಲಹೆ ನೀಡಿದ್ದಾರೆ. 

ರೈತರ ಹಿತಾಸಕ್ತಿಯ ವಿರುದ್ಧ ಶಾಸನದಲ್ಲಿರುವ ಅಂಶಗಳನ್ನು ತೆಗೆದು ಹಾಕಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. 
 
ಭೂ ಸ್ವಾಧೀನ ಮಸೂದೆ ವಿರುದ್ಧ ನಾವು ಮಾಡುತ್ತಿರುವ ಹೋರಾಟ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದ ವಿರುದ್ಧ ಅಲ್ಲ. ಇದು ವ್ಯವಸ್ಥೆಯ ವಿರುದ್ಧ," ಎಂದು ಮೋದಿಗೆ ಅಣ್ಣಾ ಪತ್ರ ಬರೆದಿದ್ದಾರೆ. 
 
ಮಸೂದೆಯ ಎರಡನೇ ತಿದ್ದುಪಡಿ ಸಂದರ್ಭದಲ್ಲಿ ರೈತರು ಎತ್ತಿರುವ ಅಂಶಗಳನ್ನು ಸೇರಿಸಬೇಕಾಗಿ ದೇಶದ ರೈತರ ಪರವಾಗಿ, ನಾನು ಕೋರಿಕೊಳ್ಳುತ್ತಿದ್ದೇನೆ. ಇದು ಜನರ ಪಾರ್ಲಿಮೆಂಟ್. ಜನ ಸಂಸತ್ತೇ ಸರ್ವೋಚ್ಚ ಎಂಬುದು ನಿಮಗೆ ತಿಳಿದಿರಲಿ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅಧಿಕಾರಕ್ಕೇರಿದ ನಂತರ ಸಹ ನೀವು ಉತ್ತಮ ಆಡಳಿತ ನಡೆಸುವ ಮಾತುಗಳನ್ನಾಡಿದ್ದೀರಿ. ಆದ್ದರಿಂದ ನಾನು ಬರೆದ ಪತ್ರಕ್ಕೆ ಸರಿಯಾದ ಉತ್ತರ ನಿಮ್ಮ ಕಚೇರಿಯಿಂದ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹಜಾರೆ ಹೇಳಿದ್ದಾರೆ.
 
ನಮ್ಮದು ಕೃಷಿ ಅವಲಂಬಿತ ಆರ್ಥಿಕತೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಆದರೆ, ವಿಪರ್ಯಾಸವೆಂದರೆ ರೈತರು ಅನಿವಾರ್ಯತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ," ಎಂದು ಅವರು ಖೇದ ವ್ಯಕ್ತ ಪಡಿಸಿದ್ದಾರೆ. 

Share this Story:

Follow Webdunia kannada