Webdunia - Bharat's app for daily news and videos

Install App

ಇಷ್ಟವಾಗದ ವ್ಯಕ್ತಿಯೊಂದಿಗೆ ವಿವಾಹ: ಪತಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಮಹಾಪತ್ನಿ

Webdunia
ಶುಕ್ರವಾರ, 26 ಆಗಸ್ಟ್ 2016 (16:55 IST)
ಇಷ್ಟವಾಗದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಪತಿಯ ಗುಪ್ತಾಂಗದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿ ವರದಿಯಾಗಿದೆ.
 
ಮಧ್ಯರಾತ್ರಿ ಪತ್ನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಾಗ 25 ವರ್ಷ ವಯಸ್ಸಿನ ಪತಿ ರಾಮ್ ದಯಾಳ್ ಆರ್ಹಿವಾರ್ ಗಾಢನಿದ್ರೆಯಲ್ಲಿದ್ದ ಪೊಲೀಸ್ ಮೂಲಗಳು ತಿಳಿಸಿವೆ.
 
ಮೈಮೇಲೆ ಬೆಂಕಿ ಹೊತ್ತಿಕೊಂಡಿದ್ದರಿಂದ ಎಚ್ಚರಗೊಂಡ ಪತಿ ರಾಮ್ ಬೆಂಕಿಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾಗ ಪತ್ನಿ ಆತನ ಮುಖದ ಮೇಲೂ ಸೀಮೆಎಣ್ಣೆ ಎರಚಿ ಮತ್ತಷ್ಟು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಾಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ರಾಮ್ ದಯಾಳ್ ಆಹಿರ್ವಾರ್ ಪತ್ನಿಯನ್ನು ಪೊಲೀಸರು ಬಂಧಿಸಿ ಆಕೆಯ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲಿಸಿದ್ದಾರೆ. 
 
ಕಳೆದ 2013ರಲ್ಲಿ ಪೋಷಕರು ನನಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿದ್ದರು. ಪ್ರತಿನಿತ್ಯ ನಮ್ಮ ನಡುವೆ ಜಗಳವಾಗುತ್ತಿದ್ದರಿಂದ ಮೂರು ತಿಂಗಳ ಹಿಂದೆ ಪತಿಯನ್ನು ತೊರೆದು ತವರು ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದಾಳೆ.
 
ಆದರೆ, ಪೋಷಕರು ಒತ್ತಾಯಕ್ಕೆ ಮಣಿದು ಕೆಲ ದಿನಗಳ ಹಿಂದೆ ಮತ್ತೆ ಪತಿಯ ಮನೆಗೆ ವಾಪಸಾಗಿದ್ದಳು. ಆದರೆ, ಪತಿ ರಾತ್ರಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರಿಂದ ಕೋಪಗೊಂಡು ಆತನ ಗುಪ್ತಾಂಗಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ಆರೋಪಿ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ: ಇನ್ನೇನು ಟೇಕ್‌ ಆಫ್‌ ಆಗ್ಬೇಕು ಅನ್ನುಷ್ಟರಲ್ಲೇ ಕುಸಿದು ಬಿದ್ದ ಪೈಲಟ್‌, ತಪ್ಪಿದ ಭಾರೀ ದೊಡ್ಡ ದುರಂತ

ರಜೆ ಕೇಳಿದ್ದಕ್ಕೆ ಮಾಲೀಕ ಗದರಿದ್ದಕ್ಕೆ ಆತನ ಪತ್ನಿ, ಮಗನನ್ನೇ ಕೊಂದ ಕೆಲಸದಾತ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಆರ್ ಎಸ್ಎಸ್ ಬಗ್ಗೆ ಹುಚ್ಚುತನದ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿ: ಯಡಿಯೂರಪ್ಪ

ದ.ಕನ್ನಡ, ಮದುವೆಯಾಗುವುದಾಗಿ ನಂಬಿಸಿ, ತಾಯಿಯಾಗುವಂತೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವಶಕ್ಕೆ

ಮುಂದಿನ ಸುದ್ದಿ