Select Your Language

Notifications

webdunia
webdunia
webdunia
webdunia

ಉದ್ರಿಕ್ತ ಜನಸಮೂಹದಿಂದ ಬಿಹಾರ್ ಸಚಿವರನ್ನು ಜೀವಂತ ಸುಡಲು ಯತ್ನ

ಉದ್ರಿಕ್ತ ಜನಸಮೂಹದಿಂದ ಬಿಹಾರ್ ಸಚಿವರನ್ನು ಜೀವಂತ ಸುಡಲು ಯತ್ನ
ರೋಹತಾಸ್ , ಬುಧವಾರ, 1 ಅಕ್ಟೋಬರ್ 2014 (18:52 IST)
ರೋಹತಾಸ್ ಜಿಲ್ಲೆಯಲ್ಲಿನ ದೇವಸ್ಥಾನವೊಂದರಲ್ಲಿ ಬಿಹಾರ್ ರಾಜ್ಯದ ಕ್ಯಾಬಿನೇಟ್ ಸಚಿವರೊಬ್ಬರಿಗೆ ಗುಂಪೊಂದು ಸೋಮವಾರ ಬೆಂಕಿ ಹಚ್ಚಲು ಪ್ರಯತ್ನಿಸಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಅವರು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಘಟನೆ ನಡೆದ ಸಮಯದಲ್ಲಿ  ರೋಹತಾಸ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ. 
 
ವರದಿಗಳ ಪ್ರಕಾರ  ಬಿಹಾರ್‌ನ ಕಲೆ, ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ಖಾತೆ ಸಚಿವ ವಿನಯ್ ಬಿಹಾರಿ ನವರಾತ್ರಿ ನಿಮಿತ್ತ ಸ್ಥಳೀಯ ಆಡಳಿತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಸಿದ್ಧ ತಾರಾಚಂಡಿ  ದೇವಸ್ಥಾನಕ್ಕೆ ಹೋಗಿದ್ದರು. 
 
ಸ್ವತಃ ಜಾನಪದ ಗಾಯಕರಾಗಿರುವ ವಿನಯ್ ಬಿಹಾರಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಆ ಸಂದರ್ಭದಲ್ಲಿ ಕೆಲವು ಧಾರ್ಮಿಕ ಗೀತೆಗಳನ್ನು ಹಾಡಿದರು.
 
ಭೋಜಪುರಿ ಗಾಯಕ ಪವನ್ ಸಿಂಗ್ ತಮ್ಮ ಕಲಾ ಪ್ರದರ್ಶನ  ನೀಡುವಾಗ ಧ್ವನಿವರ್ಧಕದ ಕ್ಷೀಣತೆ ಮತ್ತು ಆಸನ ಅವ್ಯವಸ್ಥತೆಯಿಂದ ನೆರೆದ ಜನರ ಗುಂಪು ಸಿಟ್ಟಿಗೆದ್ದಿತು. 
 
ತಮ್ಮ ಕೋಪವನ್ನು ಹೊರಹಾಕಿದ ಜನರಲ್ಲಿ ಕೆಲವರು ವೇದಿಕೆಯತ್ತ ಕುರ್ಚಿಗಳನ್ನು ಬೀಸಾಡಿದರು. ಒಂದು ಕುರ್ಚಿ ಒಂದು ಪೊಲೀಸ್ ಮಹಾನಿರ್ದೇಶಕರಾದ ಆ ಚಂದನ್ ಕುಮಾರ್ ಕುಶ್ವಾಹ ಅವರಿಗೆ ತಗುಲಿತು. ಪರಿಣಾಮ ಪೋಲಿಸರು ಲಾಠಿಚಾರ್ಜ್ ನಡೆಸಬೇಕಾಯಿತು. 

Share this Story:

Follow Webdunia kannada