Select Your Language

Notifications

webdunia
webdunia
webdunia
webdunia

ದೇಶದ ರಾಜಕೀಯ ನಾಯಕರಲ್ಲಿ ಮೋದಿ ಬಲಗೈ ಬಂಟನಿಗೆ ಎರಡನೇ ಸ್ಥಾನ

ದೇಶದ ರಾಜಕೀಯ ನಾಯಕರಲ್ಲಿ ಮೋದಿ ಬಲಗೈ ಬಂಟನಿಗೆ ಎರಡನೇ ಸ್ಥಾನ
ನವದೆಹಲಿ , ಸೋಮವಾರ, 20 ಅಕ್ಟೋಬರ್ 2014 (19:55 IST)
ಮಹಾರಾಷ್ಟ್ರ ಮತ್ತು ಹರಿಯಾಣದ ಅಭೂತಪೂರ್ವ ಗೆಲುವು ದೇಶದಲ್ಲಿನ್ನೂ ನರೇಂದ್ರ ಮೋದಿ ಅಲೆ ಇದೆ ಎನ್ನುವುದನ್ನು ಸಾಬೀತು ಮಾಡಿರುವುದಲ್ಲದೇ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರನ್ನು ಪ್ರಭಾವಿ ರಾಜಕೀಯ ನಾಯಕರ ಸಾಲಿನಲ್ಲಿ ದ್ವಿತೀಯ ಸ್ಥಾನಕ್ಕೇರಿಸಿದೆ.
 
ಪ್ರಭಾವಿ ರಾಜಕೀಯ ನಾಯಕರ ಪೈಕಿ ಮೋದಿ ಅಗ್ರಸ್ಥಾನದಲ್ಲಿದ್ದರೆ, ಅದರ ಕೆಳಗಿನ ಸ್ಥಾನದಲ್ಲಿ ಅವರ ಬಲಗೈ ಭಂಟನಂತಿರುವ ಅಮಿತ್‌ ಶಾ ಇರುವುದು ದೇಶದ ರಾಜಕೀಯ ವಿಶೇಷತೆಗಳಲ್ಲಿ ಒಂದಾಗಿದೆ.
 
ಮೋದಿಯ ಜನಪ್ರಿತೆಯನ್ನು ಬುಟ್ಟಿ ತುಂಬ ಮತಗಳಾಗಿ ಪರಿವರ್ತಿಸುವ ವಿಶಿಷ್ಟ ಕಲೆಯೊಂದು ಅಮಿತ್‌ ಶಾ ಅವರಲ್ಲಿದೆ. ಈ ಚಾಣಾಕ್ಷತೆಯೇ ಅಲ್ಪಾವಧಿಯಲ್ಲಿ ಅವರನ್ನು ರಾಷ್ಟ್ರ ರಾಜಕಾರಣದ ಪಡಸಾಲೆಗೆ ಕರೆತಂದಿದೆ. 
 
ದಿನದ 24 ತಾಸು ದುಡಿಯುವ ಶ್ರಮವರಿಯದ ಕಾಯಕ ಜೀವಿ, ರಿಸ್ಕ್ ತೆಗೆದುಕೊಳ್ಳುವ ಛಾತಿ, ಕರಾರುವಾಕ್‌ ಲೆಕ್ಕಾಚಾರ, ಕಡಿಮೆ ಮಾತು ಹೆಚ್ಚು ಕೆಲಸ ಈ ಮುಂತಾದ ಗುಣಲಕ್ಷಣಗಳಿಂದಾಗಿ ಶಾ ಬಿಜೆಪಿಯಲ್ಲಿ ಎಲ್ಲ ಹಿರಿಯ ಮತ್ತು ಜನಪ್ರಿಯ ನಾಯಕರನ್ನು ಬದಿಗೊತ್ತಿ ಮುಂಚೂಣಿಗೆ ಬಂದಿದ್ದಾರೆ.
 
ಈಗ ಮೋದಿ-ಶಾ ಜೋಡಿಗೆ ಅಸಾಧ್ಯವಾದ ಕೆಲಸವೇ ಇಲ್ಲ ಎಂಬ ಭಾವನೆಯೊಂದು ಹರಡಿದೆ. ಗುಜರಾತಿನ ಸ್ಥಳೀಯಾಡಳಿತ ಚುನಾವಣೆಗಳಿಂದ ತೊಡಗಿ ಲೋಕಸಭೆ ಚುನಾವಣೆ ತನಕ ಶಾ ಲೆಕ್ಕಾಚಾರ ಎಲ್ಲೂ ತಪ್ಪಿಲ್ಲ. ಅವರು ತೆಗೆದುಕೊಂಡ ಯಾವ ರಿಸ್ಕ್ ಕೂಡ ವಿಫ‌ಲಗೊಂಡಿಲ್ಲ. ಹೀಗಾಗಿ ಅವರೀಗ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾರೆ.

Share this Story:

Follow Webdunia kannada