ದೇಶದ ಹಿತಾಶಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸದಾ ದನಿ ಎತ್ತುವ ಬಾಲಿವುಡ್ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದರು.
ಮೇರು ನಟ, ಪ್ರಧಾನಿಯೊಂದಿಗೆ ಕೆಲ ಕಾಲ ಮಾತನಾಡಿದರು. ಅಮಿತಾಬ್- ಮೋದಿ ಭೇಟಿಯ ಸಂದರ್ಭದ ಭಾವಚಿತ್ರಗಳನ್ನು ಪ್ರಧಾನ ಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ವರದಿಯೊಂದರ ಪ್ರಕಾರ ಕೆಲ ಅವಶ್ಯಕ ಕಾರಣಗಳಿಂದ ದೆಹಲಿಗೆ ಆಗಮಿಸಿದ್ದ ಅಮಿತಾಬ್ ಪ್ರಧಾನಿಯನ್ನು ಭೇಟಿಯಾಗಿದ್ದಾರೆ.
ಆದರೆ ಈ ಭೇಟಿಯ ಉದ್ದೇಶವೇನು ಎಂದು ಈವರೆಗೂ ತಿಳಿದುಬಂದಿಲ್ಲಾ. ಇದೊಂದು ಒಂದು ಅನೌಪಚಾರಿಕ ಭೇಟಿ ಆಗಿರಬಹುದು ಎಂದು ಭಾವಿಸಲಾಗಿದೆ.
ಮೋದಿ ಗುಜರಾತ್ ಸಿಎಂ ಆದಾಗಿನಿಂದಲೂ ಅವರಿಬ್ಬರ ನಡುವೆ ಆತ್ಮೀಯತೆ ಇದೆ. ಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿ ಸಹ ಬಿಗ್ ಬಿ ಗುರುತಿಸಿಕೊಂಡಿದ್ದರು.