ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಪಕ್ಷದ ಕೋರ್ ಕಮಿಟಿಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ ಸಂಜೆ ಪ್ರಧಾನಿ ಮೋದಿ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ವರದಿಗಳ ಪ್ರಕಾರ ಉತ್ತರ ಪ್ರದೇಶ್ ಮತ್ತು ಗುಜರಾತ್ ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆಗೆ ಈ ಕಾರ್ಯಾಗಾರದಲ್ಲಿ ರಣನೀತಿಯನ್ನು ರೂಪಿಸಲಾಗುವುದು.
ಪಕ್ಷದ ಸಂವಹನ ತಂತ್ರ. ಕೇಂದ್ರದ ಯೋಜನೆಗಳ ಪ್ರಚಾರ, ರಾಜ್ಯಗಳಲ್ಲಿ ಪಕ್ಷದ ಕಚೇರಿಗಳ ಆಧುನೀಕರಣ, ಇತರ ಸಾಂಸ್ಥಿಕ ಸಮಸ್ಯೆಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.
ವಾರದ ನಂತರ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿರುವ ಶಾ, ಜಿಎಸ್‌ಟಿ ( 122ನೇ) ತಿದ್ದುಪಡಿ ಮಸೂದೆ ವಿಧಾನಸಭೆಗಳಲ್ಲಿ ನಿರಾಯಾಸವಾಗಿ ಪಾಸ್ ಆಗುವಂತೆ ಮಾಡಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಬಿಜೆಪಿ ಆಡಳಿತದ ಜಾರ್ಖಂಡ್, ಆಸ್ಸಾಂ ಮತ್ತು ಛತ್ತೀಸ್‌ಗಢದಲ್ಲಿ ಬಿಲ್ ಈಗಾಗಲೇ ಪಾಸ್ ಆಗಿದೆ.