Webdunia - Bharat's app for daily news and videos

Install App

ಹಿಂಸೆಗೆ ಪ್ರಚೋದನೆ ನೀಡಿದ ಆರೋಪ: ಅಮಿತಾಬ್‌ಗೆ ಅಮೆರಿಕಾ ಕೋರ್ಟ್‌ನಿಂದ ಸಮನ್ಸ್ ಜಾರಿ

Webdunia
ಗುರುವಾರ, 26 ಫೆಬ್ರವರಿ 2015 (12:41 IST)
ಮಾನವ ಹಕ್ಕು ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಟ ಅಮಿತಾ ಬಚ್ಚನ್ ಅವರಿಗೆ 
ಅಮೆರಿಕಾದ ಲಾಸ್ ಏಂಜಲೀಸ್ ಫೆಡರಲ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. 
 
ಈ ಸಮನ್ಸ್ ಪ್ರತಿಯನ್ನು ಬಚ್ಚನ್ ಅವರಿಗೆ ಅವರ ನಿರ್ವಹಣಗಾರ ಡೇವಿಡ್ ಎ ಅಂಗರ್ ಅವರು ರವಾನಿಸಿದ್ದಾರೆ. ಇನ್ನು ಬಚ್ಚನ್ ವಿರುದ್ಧ ನ್ಯೂಯಾರ್ಕ್ ಸಿಖ್ ಸಮುದಾಯ(ಎಸ್ಎಫ್‌ಜೆ)ವು ಫೆ.23 ರಂದು ದೂರು ದಾಖಲಿಸಿತ್ತು.   
 
1984ರಲ್ಲಿ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದ ಬಚ್ಚನ್, ರಕ್ತಕ್ಕಾಗಿ ರಕ್ತ(Blood for blood) ಎಂಬ ಹೇಳಿಕೆ ನೀಡಿದ್ದರು. ಈ ಮೂಲಕ ಬಚ್ಚನ್ ಸಿಖ್ ಸಮುದಾಯದ ವಿರುದ್ಧ ಹಿಂಸೆಯನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಬಚ್ಚನ್ ವಿರುದ್ಧ ಎಸ್ಎಫ್‌ಜೆ ದೂರು ದಾಖಲಿಸಿದೆ. 
 
ಪ್ರಕರಣದ ಹಿನ್ನೆಲೆ: ಅಮಿತಾ ಬಚ್ಚನ್ ಅವರು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದರು. ಆ ವೇಳೆ ಬಚ್ಚನ್ ಅವರೊಂದಿಗೆ ಮಾತನಾಡಿದ್ದ ಅವರ ಅಭಿಮಾನಿಗಳು ನಿಮ್ಮ ಬ್ಲಾಗ್‌ನಲ್ಲಿ 'ಚಾರ್ಚಾರಸ್ ಬೇಜಾ ಫ್ರೈ' ಇದೆ ಎಂದು ಪ್ರತಿಕ್ರಿಯಿಸಿದ್ದರು. ಬಳಿಕ ಆ ಬಗ್ಗೆ ನಕ್ಕಿದ್ದ ಬಚ್ಚನ್, ಲಾಸ್ ಏಂಜಲೀಸ್ ನಗರದ ಮಾಜಿ ಮೇಯರ್ ಅವರಿಂದ ರಾಜಕೀಯ ಪಾಂಡಿತ್ಯ ಪಡೆಯುತ್ತಿದ್ದೇನೆ ಎಂದು ಹೇಳಿ ನಕ್ಕಿದ್ದರು. ಆದರೆ ಪ್ರಸ್ತುತ ಮಾತನಾಡುತ್ತಿರುವ ಅವರು ನಾನು ಹಾಗೆ ಪ್ರತಿಕ್ರಿಯಿಸಿಲ್ಲ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ '360 ಗ್ರೂಪ್'ನ ಸಹ ನಿರ್ಮಾಪಕರಾಗಿರುವ ಅಂಗರ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.    
 
ಕೋರ್ಟ್‌ನ ನಿಯಮಾವಳಿಗಳ ಪ್ರಕಾರ, ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾದ ದಿನದಿಂದ 21 ದಿನಗಳ ಒಳಗೆ ಉತ್ತರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಚ್ಚನ್ ಕೂಡ ತಮ್ಮ ಪ್ರಕರಣ ಸಂಬಂಧ ಮಾರ್ಚ್ 17ರ ಒಳಗೆ ಪ್ರತಿಕ್ರಿಯಿಸಬೇಕಿದೆ. ಇಲ್ಲವಾದಲ್ಲಿ ಪ್ರಕರಣ ಸಂಬಂಧ ಪೂರ್ವ ನಿಯೋಜಿತ ತೀರ್ಪನ್ನು ನೀಡಲು ಕೋರ್ಟ್ ಮುಂದಾಗಲಿದೆ ಎಂದು ಕೋರ್ಟ್ ತಿಳಿಸಿದೆ. 
 
ಬಚ್ಚನ್ ಅವರ ಈ ಹೇಳಿಕೆಯಿಂದ 1984ರಲ್ಲಿ ಸಿಖ್ ಸಮುದಾಯದ ಸಾವಿರಾರು ನಿರಾಪರಾಧಿಗಳ ಜೀವದ ಮೇಲೆ ಗಾಢ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಢ ವಿಧಿಸಬಹುದಾಗಿದೆ ಎಂದು ಎಸ್ಎಫ್‌ಜೆ ಕಾನೂನು ಸಲಹೆಗಾರ ಗುರ್ಪಾತ್ವಾನ್ ಸಿಂಗ್ ಪಣ್ಣುನ್ ಅವರು ಆರೋಪಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments