Select Your Language

Notifications

webdunia
webdunia
webdunia
webdunia

ನಾನು ರಾಜೀವ್ ಗಾಂಧಿ ಪುತ್ರಿ: ಮೋದಿಗೆ ಪ್ರಿಯಾಂಕಾ ತಿರುಗೇಟು

ನಾನು ರಾಜೀವ್ ಗಾಂಧಿ ಪುತ್ರಿ: ಮೋದಿಗೆ ಪ್ರಿಯಾಂಕಾ ತಿರುಗೇಟು
ನವದೆಹಲಿ , ಶುಕ್ರವಾರ, 2 ಮೇ 2014 (13:53 IST)
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತ ಪ್ರಿಯಾಂಕಾ ಗಾಂಧಿ ನನ್ನ ಮಗಳಿದ್ದಂತೆ ಎಂದು ಹೇಳಿದ್ದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪ್ರತ್ಯುತ್ತರ ನೀಡಿರುವ ಪ್ರಿಯಾಂಕಾ ನಾನು ರಾಜೀವ್ ಗಾಂಧಿ ಮಗಳು ಎಂದು ಹೇಳಿದ್ದಾರೆ. 
 
ತಮ್ಮ ಸಹೋದರ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಅಮೇಠಿಯಲ್ಲಿ ಪ್ರಚಾರ ನಡೆಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, "ನಾನು ರಾಜೀವ್ ಗಾಂಧಿ ಪುತ್ರಿ, ಅವರು ಈ ದೇಶಕ್ಕಾಗಿ ಪ್ರಾಣವನ್ನರ್ಪಿಸಿದರು. ನನ್ನ ಹೃದಯ ಮತ್ತು ಮನಸ್ಸಿನಲ್ಲಿರುವ ಅವರನ್ನು ಯಾರ ಜತೆಯೂ ಹೋಲಿಸಲಾಗದು." ಎಂದು ಹೇಳಿದರು. 
 
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ಯಾವುದೇ ಮಗಳು ತನ್ನ ತಾಯಿಯ ಮತ್ತು ಸಹೋದರನ ಗೆಲುವಿಗಾಗಿ  ಏನು ಬೇಕಾದರೂ ಮಾಡಬಹುದು. ತನ್ನ ತಾಯಿ ಮತ್ತು, ಅಣ್ಣನಿಗಾಗಿ ಮಾಡದೇ ಮತ್ತೆ ಯಾರಿಗಾಗಿ ಅವಳು ಮಾಡಲು ಸಾಧ್ಯ. ಮಗಳು ಮಗಳೇ! ಅವಳು ಮತ್ತೆ 10 ಆರೋಪಗಳನ್ನು ಹೊರಿಸಬಹುದು. ಆದರೆ ನಾನು ಅದಕ್ಕಾಗಿ ಅಸಮಾಧಾನವನ್ನು ಹೊಂದುವುದಿಲ್ಲ ಎಂದು ಹೇಳಿದ್ದರು. 

Share this Story:

Follow Webdunia kannada