Webdunia - Bharat's app for daily news and videos

Install App

ನಾನು ಎಂದಿಗೂ ಉತ್ತಮ ವಿದ್ಯಾರ್ಥಿಯಾಗಿರಲಿಲ್ಲ ಎಂದ ಪ್ರಧಾನಿ ಮೋದಿ

Webdunia
ಸೋಮವಾರ, 20 ಅಕ್ಟೋಬರ್ 2014 (14:06 IST)
ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ಅಧ್ಯಯನದ ಸಮಯದಲ್ಲಿ ಯಾವುದೇ ಪ್ರಶಸ್ತಿ ಗಳಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಪ್ರತಿಷ್ಠಿತ ಏಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರು ಕೆಲವು ಸಲಹೆಗಳನ್ನು ನೀಡಿದರು ಮತ್ತು  ತಮ್ಮ ಬಾಲ್ಯದ ದಿನಗಳ ತಮಾಷೆಯ ಸಂಗತಿಗಳನ್ನು ಹಂಚಿಕೊಂಡರು. ನಾನು ಎಂದಿಗೂ ಉತ್ತಮ ವಿದ್ಯಾರ್ಥಿಯಾಗಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಯಾವುದೇ ಪ್ರಶಸ್ತಿ ಗಳಿಸಿರಲಿಲ್ಲ ಎಂದು ಅವರು ಹೇಳಿದರು. 
 
ನೀಲಿ ನಿಲುವಂಗಿ ಮತ್ತು ಪದವಿ ಕ್ಯಾಪ್‌ ತೊಟ್ಟಿದ್ದ ಮೋದಿ , "ನಾನು ಉತ್ತಮ ರೋಗಿಯು ಇಲ್ಲ, ರೋಗಿಯಾಗಲು ಬಯಸುವುದು ಇಲ್ಲ ಹಾಗಿದ್ದಾಗ  ಈ ಸಮಾರಂಭಕ್ಕೆ ನನ್ನನ್ನು ಯಾಕೆ ಕರೆಸಿದರೆಂಬುದು ಅರ್ಥವಾಗುತ್ತಿಲ್ಲ" ಎಂದು ನಗೆ ಚಟಾಕಿ ಹಾರಿಸಿದಾಗ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು ಮತ್ತು ದೀರ್ಘ ಚಪ್ಪಾಳೆ ತಟ್ಟಿದರು. 
 
ವೈದ್ಯಕೀಯ ವೃತ್ತಿಪರರು ಸಂಶೋಧನೆಯತ್ತ, ನಿರ್ದಿಷ್ಟವಾಗಿ ಕೇಸ್ ಹಿಸ್ಟರಿಯತ್ತ ಗಮನ ನೀಡುವಂತೆ ಒತ್ತಾಯಿಸಿದ ಅವರು ಈ ಮೂಲಕ, ಮಾನವಕುಲಕ್ಕೆ ನೀವು ಅಪಾರ ಕೊಡುಗೆ ನೀಡಬಹುದು ಎಂದು ಹೇಳಿದರು.
 
"ಬಡಮಕ್ಕಳನ್ನು ವಿಶೇಷ ಅತಿಥಿಗಳನ್ನಾಗಿಸಿ ಘಟಿಕೋತ್ಸವಕ್ಕೆ ಕರೆತನ್ನಿ, ಇಂತಹ ಘಟಿಕೋತ್ಸವ ತಮ್ಮ ಭವಿಷ್ಯದ ವೃತ್ತಿಜೀವನದ ಬಗ್ಗೆ ನಿರ್ಧರಿಸಲು ಅವರಿಗೆ ಸ್ಪೂರ್ತಿಯಾಗಬಹುದು. ಬಡ ವಿದ್ಯಾರ್ಥಿಗಳಿಗೂ ಹೆಚ್ಚು ಅವಕಾಶ ಸಿಗಬೇಕಿದೆ. ಸೂಜಿ ಎಷ್ಟು ಚಿಕ್ಕದಾಗಿದೆಯೋ ಅಷ್ಟೇ ಶಕ್ತಿಶಾಲಿಯಾಗಿರುತ್ತದೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಡಿಮೆ ಇರಬಹುದು. ಆದರೆ, ಬಡ ವಿದ್ಯಾರ್ಥಿಗಳನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ" ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
 
"ನಿಮ್ಮಲ್ಲಿರುವ ವಿದ್ಯಾರ್ಥಿಯನ್ನು ಸದಾ ಜೀವಂತವಾಗಿಡಿ. ನಾನು ವಿದ್ಯಾರ್ಥಿ ಎಂಬ ಯೋಚನೆಯನ್ನು ನಿಲ್ಲಿಸದಿರಿ. ಏನಾದರೂ ಸಾಧಿಸಲು ಇರುವ ಮಾರ್ಗ ಅದೊಂದೆ", ಎಂದು 64 ವರ್ಷದ ಪ್ರಧಾನಿ ಮಹತ್ವದ ಸಲಹೆ ನೀಡಿದರು.
 
"ಮೋದಿಯವರ ಎಣೆಯಿಲ್ಲದ ಚೈತನ್ಯದ ಬಗ್ಗೆ  ಜನರು ಸದಾ ಕಮೆಂಟ್ ಮಾಡುತ್ತಿರುತ್ತಾರೆ. ಅದರಲ್ಲಿ ಕುತೂಹಲ ಪಡುವಂತದ್ದು ಏನೂ ಇಲ್ಲ. ನೀವು ವೈದ್ಯಕೀಯ ವಿದ್ಯಾರ್ಥಿಗಳು. ಕೆಲ ವೈಜ್ಞಾನಿಕ ಅಂಶಗಳ ಜತೆಗೆ  ಏನಾದರೂ ಮಾಡಬೇಕೆನ್ನುವ ಹಂಬಲ ನಿಮ್ಮನ್ನು ಸದಾ ಚೈತನ್ಯಶೀಲರನ್ನಾಗಿರಿಸುತ್ತದೆ" ಎಂದು  ತಮ್ಮ ಅಪರಿಮಿತ ಕ್ರಿಯಾಶೀಲತೆಯ ಗುಟ್ಟನ್ನವರು ಬಿಚ್ಚಿಟ್ಟರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments