Select Your Language

Notifications

webdunia
webdunia
webdunia
webdunia

ಅಲಪ್ಪುಝಾ, ಪಣಜಿ, ಮೈಸೂರು ದೇಶದಲ್ಲಿಯೇ ಸ್ವಚ್ಚ ನಗರಗಳು: ಸಿಎಸ್‌ಇ

ಅಲಪ್ಪುಝಾ, ಪಣಜಿ, ಮೈಸೂರು ದೇಶದಲ್ಲಿಯೇ ಸ್ವಚ್ಚ ನಗರಗಳು: ಸಿಎಸ್‌ಇ
ನವದೆಹಲಿ , ಮಂಗಳವಾರ, 12 ಜುಲೈ 2016 (18:05 IST)
ಕೇರಳದ ಅಲ್ಪುಝಾ, ಗೋವಾದ ಪಣಜಿ ಮತ್ತು ಕರ್ನಾಟಕದ ಮೈಸೂರು ದೇಶದಲ್ಲಿ ಅತಿ ಸ್ವಚ್ಚವಾದ ನಗರಗಳಾಗಿವೆ ಎಂದು ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‌ವಿರಾನ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
 
ದೆಹಲಿ ಮೂಲದ ಎನ್‌ವಿರಾನ್‌ಮೆಂಟ್ ಥಿಂಕ್ ಟ್ಯಾಂಕ್ ನಡೆಸಿದ ಸಮೀಕ್ಷೆಯಲ್ಲಿ ಅಲಪ್ಪುಝಾ, ಪಣಜಿ ಮತ್ತು ಮೈಸೂರು ಜಿಲ್ಲೆಗಳ ನಂತರ, ಇತರ 11 ನಗರಗಳನ್ನು ಆಯ್ಕೆ ಮಾಡಿದೆ. 14 ನಗರಗಳಲ್ಲಿ 12ನೇ ಸ್ಥಾನ ಚಂಡೀಗಡ್, 13ನೇ ಸ್ಥಾನ ಬೆಂಗಳೂರು, ದೆಹಲಿ 14ನೇ ಸ್ಥಾನವನ್ನು ಪಡೆದಿದೆ.
 
ದೆಹಲಿ, ಚಂಡೀಗಢ್ ಮತ್ತು ಬೆಂಗಳೂರು ನಗರಗಳಲ್ಲಿ ಸ್ವಚ್ಚತೆ ಕಂಡು ಬಂದಿದ್ದರೂ ಕಸದ ತಿಪ್ಪೆಗುಂಡಿಗಳ ನಿರ್ವಹಣೆ ತುಂಬಾ ದುರ್ಬಲವಾಗಿದೆ ಎಂದು ಸಿಎಸ್‌ಇ ಸಮೀಕ್ಷೆಯಲ್ಲಿ ತಿಳಿಸಿದೆ. 
 
ಕಸವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವ ಬಗ್ಗೆ ಇಂತಹ ನಗರಗಳು ತಿಳಿದುಕೊಳ್ಳಬೇಕಾಗಿದೆ ಎಂದು ಸಮೀಕ್ಷೆ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
 
ಈ ಸಂದರ್ಭದಲ್ಲಿ ನಾಟ್ ಇನ್‌ ಮೈ ಬ್ಯಾಕ್‌ಯಾರ್ಡ್ ಎನ್ನುವ ಶೀರ್ಷಿಕೆಯಿರುವ ಪುಸ್ತಕವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಬಿಡುಗಡೆಗೊಳಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ಗಲಭೆ: ಹಿಂದೂ ಪರಿವಾರಕ್ಕೆ ಊಟ ನೀಡಲು ಮೈಲುಗಟ್ಟಲೆ ಪ್ರಯಣಿಸುತ್ತಿರುವ ಮುಸ್ಲಿಂ ದಂಪತಿ