Webdunia - Bharat's app for daily news and videos

Install App

ಅಖಿಲೇಶ್ ಅತ್ಯುತ್ತಮ ಸಿಎಂ, ಜನಪ್ರಿಯ ನಾಯಕರಲ್ಲ: ಅಮರ್ ಸಿಂಗ್

Webdunia
ಮಂಗಳವಾರ, 25 ಅಕ್ಟೋಬರ್ 2016 (16:02 IST)
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅತ್ಯುತ್ತಮ ಮುಖ್ಯಮಂತ್ರಿ. ಆದ್ರೆ ಇನ್ನೂ ಜನಪ್ರಿಯ ನಾಯಕರಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.
 
ಸಮಾಜವಾದಿ ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುವ ಅಖಿಲೇಶ್ ಯಾದವ್ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ. 
 
ಅಖಿಲೇಶ್ ಯಾದವ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ತೋರಿದ ಕಾಳಜಿ ಮನಮೆಚ್ಚುವಂತಹದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಅವರೊಬ್ಬ ಜನಪ್ರಿಯ ನಾಯಕರಲ್ಲ ಎಂದು ನಾನು ಹೇಳಿಲ್ಲ. ಜನಪ್ರಿಯ ನಾಯಕರಾಗಲು ಸಮಯದ ಅಗತ್ಯವಿದೆ. ಅಖಿಲೇಶ್ ಯುವಕರಾಗಿದ್ದರಿಂದ, ಮುಲಾಯಂ ಸಿಂಗ್ ಅವರನ್ನು ನೋಡಿ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.
 
ಆರು ವರ್ಷಗಳ ಉಚ್ಚಾಟನೆಯ ನಂತರ ಪ್ರಸಕ್ತ ವರ್ಷದ ಆರಂಭದಲ್ಲಿಯೇ ಸಮಾಜವಾದಿ ಪಕ್ಷದ ತೆಕ್ಕೆಗೆ ಬಂದ ಅಮರ್ ಸಿಂಗ್, ಸಮಾಜವಾದಿ ಪಕ್ಷದ ಬಿಕ್ಕಟ್ಟಿನ ಮೂಲ ರೂವಾರಿ ಎಂದು ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.   
 
ಶಿವಪಾಲ್ ಯಾದವ್‌ಗೆ ಮುಖ್ಯಮಂತ್ರಿಯಾಗಿಸಲು ಅಮರ್ ಸಿಂಗ್ ಬೆಂಬಲ ನೀಡುತ್ತಿದ್ದಾರೆ ಎಂದು ಅಖಿಲೇಶ್ ಬೆಂಬಲಿಗರು ಆರೋಪಿಸಿದ್ದಾರೆ. ಶಿವಪಾಲ್ ಯಾದವ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿಸುವ ಹಿಂದೆ ಅಮರ್ ಸಿಂಗ್ ಕೈವಾಡವಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಪಾಕ್‌ಗೆ ಸಹಾಯ ಮಾಡಿದ್ದಕ್ಕೆ ಟರ್ಕಿಗೆ ತಕ್ಕ ಉತ್ತರ ಕೊಟ್ಟ ಭಾರತ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments