Webdunia - Bharat's app for daily news and videos

Install App

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

Sampriya
ಸೋಮವಾರ, 23 ಜೂನ್ 2025 (18:08 IST)
ಜಮ್ಮು: ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನ ಪತನವಾಗಿ 271ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಏರ್ ಇಂಡಿಯಾದ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ವರದಿಯಾಗುತ್ತಿದೆ. 

ಇಂದು ಮತ್ತೊಂದು ಏರ್‌ ಇಂಡಿಯಾ ವಿಮಾನವು ಪ್ರಯಾಣಿಕರನ್ನು ಗೊಂದಲಕ್ಕೆ ಸಿಲುಕಿಸಿದೆ. ದೆಹಲಿಯಿಂದ ಜಮ್ಮು ಮೂಲಕ ಶ್ರೀನಗರಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಧ್ಯಾಹ್ನ ಇಲ್ಲಿ ಲ್ಯಾಂಡ್ ಆಗದೆ ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸಾಗಿದೆ.

ಐಎಕ್ಸ್-2564 ವಿಮಾನವು ಶ್ರೀನಗರಕ್ಕೆ ಹೊರಟಿತ್ತು. ಮಧ್ಯಾಹ್ನದ ಸುಮಾರಿಗೆ ಜಮ್ಮುವಿನಲ್ಲಿ ನಿಲುಗಡೆ ಇತ್ತು, ಆದರೆ, ಅದು ದೆಹಲಿಗೆ ಹಿಂದಿರುಗಿದೆ. ಹಿಂದಿರುಗುವುದಕ್ಕೂ ಮುನ್ನ ವಿಮಾನ ಕೆಲ ಕಾಲ ಜಮ್ಮು ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸಿದೆ.

ವಿಮಾನ ಲ್ಯಾಂಡ್ ಆಗದೆ ದೆಹಲಿಗೆ ಹಿಂದಿರುಗಲು ಕಾರಣವೇನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ಹವಾಮಾನದಲ್ಲಿ ಯಾವುದೇ ತೊಂದರೆ ಇರಲಿಲ್ಲ. ರನ್‌ವೇ ಸ್ಪಷ್ಟವಾಗಿತ್ತು, ಆದರೆ, ಪೈಲಟ್‌ಗೆ ಸೂಕ್ತವಾದ ಲ್ಯಾಂಡಿಂಗ್ ಪ್ರದೇಶವನ್ನು ಕಂಡುಕೊಳ್ಳಲಾಗಲಿಲ್ಲ ಎಂಬಂತೆ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌ ನಡುವಿನ ಸಂಘರ್ಷ: ಇರಾನ್‌ಗೆ ರಫ್ತಾಗದೆ ಭಾರತದಲ್ಲೇ ಉಳಿದ 1ಲಕ್ಷ ಟನ್ ಬಾಸ್ಮತಿ

ಕಾಂಗ್ರೆಸ್ ಪಕ್ಷದವರೇ ಛೀ ಥೂ ಎಂದು ಉಗಿದರೂ ಎಂಥಾ ಭಂಡ ಬಾಳು ಇವರದ್ದು: ಆರ್ ಅಶೋಕ್

ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೇಲ್‌, ಇರಾನ್ ಸರ್ಕಾರವೇ ಗುರಿ

ರಾಜು ಕಾಗೆಯೇ ಕಾಂಗ್ರೆಸ್ ನ ಭ್ರಷ್ಟಾಚಾರ ಬಯಲು ಮಾಡಿದ್ದಾರೆ: ಬಿವೈ ವಿಜಯೇಂದ್ರ

Video, ಶಾಸಕನ ಜತೆ ರೈಲು ಸೀಟು ವಿನಿಮಯ ಮಾಡಿಕೊಳ್ಳಲು ನಿರಾಕರಣೆ: ರಕ್ತಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು

ಮುಂದಿನ ಸುದ್ದಿ
Show comments