Webdunia - Bharat's app for daily news and videos

Install App

ಸ್ಕರ್ಟ್ ಎಳೀತಾರೆ..ಮೈಕೈ ಮುಟ್ಟುತ್ತಾರೆ.. ವಾಶ್ ರೂಂಗೆ ಬಾ ಅಂತಾರೆ.. ವಿಮಾನದಲ್ಲಿನ ಕಹಿ ಅನುಭವ ಬಿಚ್ಚಿಟ್ಟ ಗಗನಸಖಿಯರು

Webdunia
ಬುಧವಾರ, 21 ಜೂನ್ 2017 (14:18 IST)
ಗಗನಸಖಿಯರು ಎಂದರೆ ವಿಮಾನದಲ್ಲಿ ತಣ್ಣಗೆ ಇರುತ್ತಾರೆ. ಒಳ್ಳೆಯ ಸಂಬಳ ಪಡೆಯುತ್ತಾರೆ ಎಂಬ ಭಾವನೆ ಇದೆ. ಆದರೆ, ಈ ಗಗನಸಖಿಯರು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ವಿಮಾನ ಹಾರಾಟ ನಡೆಸುತ್ತಿರುವಾಗ ಕೆಲ ಕಿಡಿಗೇಡಿ ಪ್ರಯಾಣಿಕರು ಹೇಗೆಲ್ಲ ವರ್ತಿಸಿದ್ದಾರೆ ಎಂಬ ಆಘಾತಕಾರಿ ಅಂಶಗಳನ್ನ ಹೆರೇಳಲು ಇಚ್ಛಿಸದ ಗಗನಸಖಿಯರು ಮಾಧ್ಯಮಗಳ ಮುಂದೆ  ಬಿಚ್ಚಿಟ್ಟಿದ್ದಾರೆ.

ಗಗನಸಖಿ 1: ಅದು ನನ್ನ ವೃತ್ತಿ ಜೀವನದ ಅತ್ಯಂತ ಕಹಿ ಘಟನೆಗಳಲ್ಲಿ ಒಂದು. ಪ್ರಯಾಣಿಕನೊಬ್ಬ ಅವನ ಜೊತೆ ಮದ್ಯ ಸೇವಿಸುವಂತೆ ಬಲವಂತ ಮಾಡಿದ. ಎಷ್ಟೇ ಹೇಳಿದರೂ ಬಿಡಲಿಲ್ಲ. ಎರಡು ನಿಮಿಷ ಬಂದೆ ಎಂದೆ ಹೇಳಿ ನನ್ನ ಕೊಠಡಿಗೆ ಬಂದು ಕೆಲಸದಲ್ಲಿ ತಲ್ಲೀನಳಾದೆ. ಸ್ವಲ್ಪ ಸಮಯದಲ್ಲೇ ಹೈದ್ರಾಮಾ ಮಾಡಿದ ಪ್ರಯಾಣಿಕ ಜೋರಾಗಿ ಕಿರುಚಿ ನನಗೆ ಆ ಗಗನಸಖಿ ಕೋಕ್ ಕೊಡಲು ನಿರಾಕರಿಸಿದಳು ಎಂದ ಅರಚಾಡಿದ. ಸುಳ್ಳು ಆರೋಪ ಮಾಡಿ ನನ್ನ ಕಣ್ಣಲ್ಲಿ ಕಣ್ಣೀರು ತರಿಸಿದ ಎಂದಿದ್ದಾರೆ.

2. ಗಗನಸಖಿ: ವಿಮಾನದಲ್ಲಿ ಭದ್ರತಾ ತರಬೇತಿ ನೀಡುವ ವೇಳೆ ನನ್ನ ಸ್ನೇಹಿತೆಯೊಬ್ಬಳು ಇನ್ನಿಲ್ಲದ ಹಿಂಸೆ ಅನುಭಸಿದ್ದಳು. ತರಬೇತಿ ವೇಳೆ ಪ್ರಯಾಣಿಕನೊಬ್ಬ ಅವಳ ಸ್ಕರ್ಟ್ ಹಿಡಿದು ಎಳೆಯುತ್ತಿದ್ದ. ಎಷ್ಟೇ ಹೇಳಿದರೂ ಬಿಡಲಿಲ್ಲ. ಅದು ಕಡ್ಡಾಯ ಭದ್ರತಾ ತರಬೇತಿಯಾದ್ದರಿಂದ ನಿಲ್ಲಿಸಲಾಗದೇ ಒದ್ದಾಡಿದ್ಧಾಳೆ. ಪ್ರತಿರೋಧ ತೋರಿದಾಗ ಅವಳ ಮೇಲೆ ನೀರೆಸೆದ. ಪ್ರಯಾಣಿಕನೊಬ್ಬ ಬೇಕೆಂದೇ ವಸ್ತುವನ್ನ ಕೆಳಗೆ ಬೀಳಿಸುತ್ತಿದ್ದ. ಅದನ್ನ ಎತ್ತಿಕೊಡಲು ನಾವು ಬಾಗಿದಾಗ ಫೋಟೋ ತೆಗೆಯುತ್ತಿದ್ದ ಎನ್ನುತ್ತಾರೆ ಮತ್ತೊಬ್ಬ ಗಗನಸಖಿ.

ಮತ್ತೊಬ್ಬ ಗಗನಸಖಿ ಹೇಳುವ ಪ್ರಕಾರ, ಪ್ರಯಾಣಿಕನೊಬ್ಬ ಆಕೆಯನ್ನ ಅವನ ಜೊತೆ ವಾಶ್ ರೂಂಗೆ ಬರಲು ಪೀಡಿಸಿದ್ದನಂತೆ. ಅದಂತೂ ನನ್ನ ಜೀವನದ ಅಸಹ್ಯಕರ ಅನುಭವ ಎಂದಿದ್ದಾರೆ.

ಮತ್ತೊಬ್ಬ ಕುಡುಕ ಪ್ರಯಾಣಿಕ ಕಂಠಪೂರ್ತಿ ಕುಡಿದು ಮೈಕೈ ಮುಟ್ಟುತ್ತಿದ್ದನಂತೆ. ಎಷ್ಟೇ ಮನವಿ ಮಾಡಿದರೂ ಆತನ ಕಾಮಚೇಷ್ಟೆ ನಿಂತಿಲ್ಲ. ಕೂಡಲೇ ವಿಮಾನ ಸಿಬ್ಬಂದಿ ನಿಲ್ದಾಣದಲ್ಲಿ ಹೊರಗೆ ದಬ್ಬಿದರಂತೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ