Webdunia - Bharat's app for daily news and videos

Install App

ದೆಹಲಿಯಲ್ಲಾಗುತ್ತಿರುವ 50% ಅತ್ಯಾಚಾರಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಕಾರಣವಂತೆ!

Webdunia
ಶುಕ್ರವಾರ, 26 ಫೆಬ್ರವರಿ 2016 (12:05 IST)
ಮೊನ್ನೆ ತಾನೆ ಜೆಎನ್‌ಯು ಸೆಕ್ಸ್ ಮತ್ತು ಡ್ರಗ್ಸ್ ಕೇಂದ್ರ ಎಂದು ಹೇಳುವುದರ ಮೂಲಕ ವ್ಯಾಪಕ ಖಂಡನೆಗೆ ಗುರಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಜೆಎನ್‌ಯು ಬೆನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೆಂಗಣ್ಣಿಗೆ ಗುರಿಯಾಗಿ ಸಮನ್ಸ್ ಪಡೆದರೂ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನವದೆಹಲಿಯಲ್ಲಾಗುತ್ತಿರುವ 50% ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳಿಗೆ ಜೆಎನ್‌ಯು ವಿದ್ಯಾರ್ಥಿಗಳೇ ಜವಾಬ್ದಾರರು ಎಂದು ಜ್ಞಾನ್ ದೇವ್ ಅಹುಜಾ ಹೇಳಿದ್ದಾರೆ.
 
ಜೆಎನ್‌ಯುವಿನಲ್ಲಿ ಓದುತ್ತಿರುವವರು ಲೈಂಗಿಕತೆ ಮತ್ತು ಡ್ರಗ್ಸ್ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಕಳೆದೆರಡು ದಿನಗಳ ಹಿಂದೆ ಅವರು ಆರೋಪಿಸಿದ್ದರು.  ಜೆಎನ್‌ಯುಗಳ ಅಕ್ರಮ ಅಂಕಿಅಂಶಗಳ ಪಟ್ಟಿಯನ್ನು ಸಹ ಅವರು ನೀಡಿದ್ದು, 10,000ಕ್ಕಿಂತ ಹೆಚ್ಚು ಸಿಗರೇಟ್ ತುಂಡುಗಳು ಮತ್ತು 4,000 ಬೀಡಿ ತುಂಡುಗಳು, 50,000 ದೊಡ್ಡ ಮತ್ತು ಸಣ್ಣ ತುಂಡು ಎಲುಬುಗಳು, 2,000 ಚಿಪ್ಸ್ ಕವರ್, 3,000 ಬಳಸಿದ ಕಾಂಡೋಮ್‌ಗಳು ವಿಶ್ವವಿದ್ಯಾಲಯ ಆವರಣದಲ್ಲಿ ಸಿಕ್ಕಿವೆ. ನಮ್ಮ ಸಹೋದರಿಯರ ಮತ್ತು ಹೆಣ್ಣು ಮಕ್ಕಳ ಜತೆಯಲ್ಲಿ ಅವರು ಕುಕೃತ್ಯವನ್ನೆಸಗಿದ್ದಾರೆ. 500 ಗರ್ಭನಿರೋಧಕ ಚುಚ್ಚುಮದ್ದುಗಳು ಸಹ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ತೆಯಾಗಿವೆ ಎಂದು ಹೇಳಿದ್ದರು.
 
ರಾತ್ರಿ 8 ಗಂಟೆಯ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆ ಡ್ರಗ್ಸ್ ಸೇವಿಸುತ್ತಾರೆ. ಜೆಎನ್‌ಯುನಲ್ಲಿ ಓದುತ್ತಿರುವವರು ಮಕ್ಕಳಲ್ಲ, ಇಬ್ಬರು ಮಕ್ಕಳ ಪೋಷಕರು. ಬೆಳಕಿನಲ್ಲಿ ಶಾಂತಿ ಪ್ರತಿಭಟನೆ ನಡೆಸುವ ಅವರು ರಾತ್ರಿ ಅಸಭ್ಯ ನೃತ್ಯವನ್ನು ಪ್ರದರ್ಶಿಸುತ್ತಾರೆ ಎಂದು ಶಾಸಕ ಆರೋಪಿಸಿದ್ದರು.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ