Select Your Language

Notifications

webdunia
webdunia
webdunia
webdunia

ದೆವ್ವವನ್ನು ಹಿಡಿಯಲು ಹೊರಟ ಪೊಲೀಸರು

ದೆವ್ವವನ್ನು ಹಿಡಿಯಲು ಹೊರಟ ಪೊಲೀಸರು
ಅಲಹಾಬಾದ್ , ಗುರುವಾರ, 2 ಜುಲೈ 2015 (11:52 IST)
ಉತ್ತರಪ್ರದೇಶದ ಸಚಿವ ಆಜಂ ಖಾನ್ ಕಾಣೆಯಾದ ತಮ್ಮ ಎಮ್ಮೆಗಳನ್ನು ಹುಡುಕಲು ಪೊಲೀಸರನ್ನು ಕಳುಹಿಸಿದ ಸಂಗತಿ ನಿಮಗೆ ಗೊತ್ತಿರಲೇಬೇಕು.  ಈಗ ರಾಜ್ಯ ಪೊಲೀಸರಿಗೆ ದೆವ್ವಗಳನ್ನು ಹುಡುಕುವ ಕಾರ್ಯವನ್ನು ವಹಿಸಲಾಗಿದೆ. ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಅಪರಾಧಗಳು ನಡೆಯುತ್ತಿರುವಾಗ ಅದನ್ನು ನಿಯಂತ್ರಣಕ್ಕೆ ತರುವುದರ ಕಡೆ ಚಿತ್ತ ಹರಿಸುವುದನ್ನು ಬಿಟ್ಟು ಭೂತಗಳ ಹಿಂದೋಡಲು ಪೊಲೀಸರನ್ನು ಬಿಟ್ಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ವರದಿಗಳ ಪ್ರಕಾರ ಅಲಹಾಬಾದ್‌ನ ಸಂತ್‌ ನಿರಂಕಾರಿ ರೈಲ್ವೆ ಕ್ರಾಸಿಂಗ್ ಬಳಿ ದೆವ್ವವೊಂದು ಓಡಾಡುತ್ತಿದೆಯಂತೆ. ಈ ವದಂತಿ ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೆವ್ವ ಓಡಾಡುವ ಸುದ್ದಿ ಪ್ರದೇಶದ ತುಂಬ ಹರಡಿದ್ದು ಭಯಕ್ಕೆ ಒಳಗಾಗಿರುವ ಜನರು  ಆ ಪ್ರದೇಶದಲ್ಲಿ ಓಡಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. 
 
ಜನರು ಈ ಕುರಿತು ಪೊಲೀಸರಲ್ಲೂ ದೂರಿದ್ದು ಈ ದೆವ್ವದ ರಹಸ್ಯವನ್ನು ಭೇದಿಸುವಂತೆ ಕೀಡ್‌ಗಂಜ್ ಠಾಣೆ ಪೊಲೀಸರಿಗೆ ಎಸ್ಎಸ್‌ಪಿ ಆದೇಶಿದ್ದಾಕೆ. ಕಳ್ಳರ ಗ್ಯಾಂಗ್‌ವೊಂದು ದೆವ್ವದ ಕತೆ ಸೃಷ್ಟಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. 
 
ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲು ಪೊಲೀಸ್ ಅಧಿಕಾರಿ ಆದೇಶಿಸಿದ್ದಾರೆ.

Share this Story:

Follow Webdunia kannada