Webdunia - Bharat's app for daily news and videos

Install App

ಸ್ಪೀಕರ್ ಆಗಲು ಅಡ್ವಾಣಿ ಒಪ್ಪುವ ಸಾಧ್ಯತೆ

Webdunia
ಶುಕ್ರವಾರ, 16 ಮೇ 2014 (14:47 IST)
ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಮತ ಎಣಿಕೆಯ ಮುನ್ನಾದಿನವಾದ ನಿನ್ನೆಯಿಂದಲೇ ಸರಕಾರ ರಚನೆ, ಗೆಲುವಿನ ಸಂಭ್ರಮಾಚರಣೆಯ ತಯಾರಿಯಲ್ಲಿದ್ದ ಬಿಜೆಪಿ, ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಹಿರಿಯ ನಾಯಕ ಅಡ್ವಾಣಿಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. 
 
ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿಗಿಂತ ವಯಸ್ಸಿನಲ್ಲಿ ಮತ್ತು ಪಕ್ಷದಲ್ಲಿ ತುಂಬ ಹಿರಿಯರಾಗಿರುವ ಅಡ್ವಾಣಿ ಪಕ್ಷಾತೀತವಾದ, ಸ್ವತಂತ್ರ ಮತ್ತು ಸಂವಿಧಾನಾತ್ಮಕವಾದ ಸ್ಪೀಕರ್ ಸ್ಥಾನವನ್ನು ನಿರ್ವಹಿಸಲು ಆಸಕ್ತಿಯನ್ನು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
ಅಡ್ವಾಣಿ ಅನೌಪಚಾರಿಕವಾಗಿ ಕೆಳಮನೆಯ ಬಗ್ಗೆ ತನ್ನ ಆಸಕ್ತಿಯನ್ನು ಹೇಳಿಕೊಂಡಿದ್ದು, ಆದರೆ ಬಹಿರಂಗವಾಗಿ ಅದನ್ನು ಒಪ್ಪಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
 
ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯಂತಹ ಹಿರಿಯ ನಾಯಕರು, ತಮಗಿಂತ ಅತ್ಯಂತ ಕಿರಿಯನಾಗಿರುವ ಮೋದಿ ಕೈಕೆಳಗೆ ಕಾರ್ಯನಿರ್ವಹಿಸಿ ಮುಜುಗರ ಪಡುವುದನ್ನು ತಪ್ಪಿಸಲು ಗೌರವಯುತವಾದ, ಸ್ವತಂತ್ರವಾದ ಸ್ಥಾನಮಾನಗಳನ್ನು ನೀಡುವುದಕ್ಕೆ ಬಿಜೆಪಿ ನಾಯಕರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತದೆ.  
 
ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದಕ್ಕೆ ತೀವೃ ವಿರೋಧ ವ್ಯಕ್ತ ಪಡಿಸಿದ್ದ  ಆಡ್ವಾಣಿ, ಜೋಶಿ ಮತ್ತು ಸ್ವರಾಜ್ ಅವರಿಗೆ ಸರಕಾರದಲ್ಲಿ ತಕ್ಕ ಸ್ಥಾನಮಾನ ನೀಡುವುದು ಅತ್ಯಂತ ಕಠಿಣ ಕೆಲಸ ಎಂದು ಪಕ್ಷದ ಮೂಲಗಳು ಒಪ್ಪಿಕೊಂಡಿವೆ.

LIVE Karnataka Lok Sabha 2014 Election Results
http://elections.webdunia.com/karnataka-loksabha-election-results-2014.htm
 
LIVE Lok Sabha 2014 Election Results
http://elections.webdunia.com/Live-Lok-Sabha-Election-Results-2014-map.htm

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ನೆಹರೂ ತಾತ ನಮ್ಗೆ ರಾಜಕೀಯವೇ ಹೇಳಿ ಕೊಟ್ಟಿಲ್ಲ

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಅತ್ಯಾಚಾರ, ರೇಪಿಸ್ಟ್‌ ಕೊನೆಗೂ ಅರೆಸ್ಟ್‌

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

Show comments