Select Your Language

Notifications

webdunia
webdunia
webdunia
webdunia

ಆದರ್ಶ ಹಗರಣ: ಸಿಬಿಐ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಮಾಜಿ ಸಿಎಂ ಚವ್ಹಾಣ

ಆದರ್ಶ ಹಗರಣ: ಸಿಬಿಐ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಮಾಜಿ ಸಿಎಂ ಚವ್ಹಾಣ
ಮುಂಬೈ , ಶುಕ್ರವಾರ, 29 ಜನವರಿ 2016 (16:28 IST)
ಆದರ್ಶ ಹಗರಣ ಕುರಿತಂತೆ ತಮ್ಮವಿರುದ್ಧ ಸಿಬಿಐ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್‌ಗೆ ಶಿಫಾರಸ್ಸು ಮಾಡಿರುವ ವಿರುದ್ಧ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸರಕಾರ ಸಿಬಿಐ ಮೂಲಕ ಹೈಪ್ರೋಫೈಲ್ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
ಬಹುಕೋಟಿ ಆದರ್ಶ ಹಗರಣ ಕುರಿತಂತೆ ಹೊಸ ಸಾಕ್ಷ್ಯಗಳು ದೊರೆತಿರುವುದರಿಂದ ಚವ್ಹಾಣ್ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ನೀಡುವಂತೆ ಸಿಬಿಐ ರಾಜ್ಯಪಾಲರನ್ನು ಕೋರಿತ್ತು. ಸಿಬಿಐ ಕೋರಿಕೆಯನ್ನು ರಾಜ್ಯಪಾಲರು ಮುಖ್ಯಮಂತ್ರಿ ದೇವಂದ್ರ ಫಡ್ನವೀಸ್‌ಗೆ ರವಾನಿಸಿ ಅಭಿಪ್ರಾಯ ನೀಡುವಂತೆ ಆದೇಶಿಸಿದ್ದರು.
 
ಈಗಾಗಲೇ ಹಗರಣ ಕುರಿತಂತೆ ಪ್ರಕರಣ ದಾಖಲಿಸಲಾಗಿದ್ದು, ಸಚಿವ ಸಂಪುಟ ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದೆ.  
 
ಬಿಜೆಪಿ ಸಂಸದ ಕಿರಿಟ್ ಸೋಮೈಯಾ ಆಧಾರರಹಿತ ಆರೋಪಗಳನ್ನು ಮಾಡುವುದರಲ್ಲಿ ನಿಸ್ಸಿಮರಾಗಿದ್ದಾರೆ. ಅವರು ಕಾನೂನು ತಜ್ಞರಲ್ಲ. ಸದಾ ಇಂತಹ ಕೃತ್ಯಗಳಿಂದಲೇ ಖ್ಯಾತ ಪಡೆದಿದ್ದಾರೆ ಎಂದು ಚವ್ಹಾಣ ಲೇವಡಿ ಮಾಡಿದ್ದಾರೆ.
 
ಪ್ರಕರಣದಲ್ಲಿ ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಬಳಸಲಾಗುತ್ತಿದೆ. ಅಂದಿನ ರಾಜ್ಯಪಾಲರು ರಾಹುಲ್ ಗಾಂಧಿ ವಿರುದ್ಧದ ತನಿಖೆಗೆ ಅನುಮತಿ ನೀಡಿರಲಿಲ್ಲ. ಸೋಮೈಯಾ ತಮ್ಮ ಆರೋಪಗಳಿಗೆ ಸಾಕ್ಷ್ಯವನ್ನು ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸವಾಲ್ ಹಾಕಿದ್ದಾರೆ.  

Share this Story:

Follow Webdunia kannada