Select Your Language

Notifications

webdunia
webdunia
webdunia
webdunia

72 ಗಂಟೆಯೊಳಗೆ ಸೃತಿ ಇರಾನಿ ವಿರುದ್ಧ ಕ್ರಮ ಕೈಗೊಳ್ಳಿ: ಮೋದಿಗೆ ಆಮ್ ಆದ್ಮಿ ಎಚ್ಚರಿಕೆ

72 ಗಂಟೆಯೊಳಗೆ ಸೃತಿ ಇರಾನಿ ವಿರುದ್ಧ ಕ್ರಮ ಕೈಗೊಳ್ಳಿ: ಮೋದಿಗೆ ಆಮ್ ಆದ್ಮಿ ಎಚ್ಚರಿಕೆ
ನವದೆಹಲಿ , ಗುರುವಾರ, 25 ಜೂನ್ 2015 (17:07 IST)
ನಕಲಿ ಪದವಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ವಿರುದ್ಧ ಕ್ರಮ ತೆಗೆದುಕೊಂಡಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸೃತಿ ಇರಾನಿ ವಿರುದ್ಧ ಮೂರು ದಿನಗಳೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ದೇಶಾದ್ಯಂತ ಹೋರಾಟ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷ ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.  
 
ಕಳಂಕಿತ ಹವಾಲಾ ಆರೋಪಿ ಲಲಿತ್ ಮೋದಿ ಪ್ರಕರಣದಲ್ಲಿ ಭಾಗಿಯಾದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ಮೋದಿ ಯಾಕೆ ಮೌನವಾಗಿದ್ದಾರೆ? ಮೌನಂ ಸಮ್ಮತಿ ಲಕ್ಷಣಂ ಎಂದರ್ಥವೇ ಎಂದು ಆಮ್ ಆದ್ಮಿ ನಾಯಕರು ಪ್ರಶ್ನಿಸಿದ್ದಾರೆ. 
 
ಸೃತಿ ಇರಾನಿಯನ್ನು ಬಂಧಿಸಲು ಕೇಂದ್ರ ಸರಕಾರಕ್ಕೆ 72 ಗಂಟೆಗಳ ಗಡುವು ನೀಡಲಾಗಿದೆ. ಒಂದು ವೇಳೆ ಮೂರು ದಿನಗಳೊಳಗಾಗಿ ಸಚಿವೆಯ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ರೆ ಆಮ್ ಆದ್ಮಿ ಪಕ್ಷ ಹೋರಾಟ ಆರಂಭಿಸಲಿದೆ ಎಂದು ಹೇಳಿದ್ದಾರೆ.
 
ಇಂತಹ ವ್ಯಕ್ತಿಗಳು ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದರೂ ಪ್ರಧಾನಿ ತುಟಿಬಿಚ್ಚುತ್ತಿಲ್ಲ.ಮೋದಿ ಇದೀಗ ಮನಮೋಹನ್ ಸಿಂಗ್ ಪಾರ್ಟ್ 2 ಆಗಿದ್ದಾರೆ ಎಂದು ಲೇವಡಿ ಮಾಡಿದೆ.
 
ಬಿಜೆಪಿಯನ್ನು ನಿಯಂತ್ರಿಸುವ ಆರೆಸ್ಸೆಸ್ ಕೈಯಲ್ಲಿ ಪ್ರಧಾನಿ ಮೋದಿ ಅಸಹಾಯಕ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅಶುತೋಶ್ ವ್ಯಂಗ್ಯವಾಡಿದ್ದಾರೆ.
 
ಚುನಾವಣೆ ಆಯೋಗಕ್ಕೆ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದ್ದರಿಂದ ಅವರ ವಿರುದ್ಧದ ಅರ್ಜಿ ವಿಚಾರಣೆಗೆ ಅರ್ಹವಾಗಿದೆ ಎಂದು ಹೇಳಿದ ಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 28 ಕ್ಕೆ ಮುಂದೂಡಿದೆ.
 

Share this Story:

Follow Webdunia kannada