Select Your Language

Notifications

webdunia
webdunia
webdunia
webdunia

ಉನ್ನತ ಪೊಲೀಸ್ ಅಧಿಕಾರಿಯಿಂದ ಸೊಸೆ ಮೇಲೆ ಅತ್ಯಾಚಾರ!

ಉನ್ನತ ಪೊಲೀಸ್ ಅಧಿಕಾರಿಯಿಂದ ಸೊಸೆ ಮೇಲೆ ಅತ್ಯಾಚಾರ!
ನವದೆಹಲಿ , ಬುಧವಾರ, 28 ಜನವರಿ 2015 (12:41 IST)
ದೆಹಲಿ ಪೊಲೀಸ್‌ನ ಎಸಿಪಿಯೊಬ್ಬರ ವಿರುದ್ಧ ಸೊಸೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ದಾಖಲಾಗಿದೆ.
ಆರೋಪಿ ಎಸಿಪಿ ಕಳೆದ ವರ್ಷ ಮೇ ತಿಂಗಳಲ್ಲಿ ಉತ್ತರ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ಪೀಡಿತೆ ಜನವರಿ 23 ರಂದು  ದಕ್ಷಿಣ ದೆಹಲಿಯ ವಸಂತಕುಂಜ ಠಾಣೆಯಲ್ಲಿ ಎಸಿಪಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇದುವರೆಗು ಬಂಧಿಸಲಾಗಿಲ್ಲ ಮತ್ತು  ದಕ್ಷಿಣ ದೆಹಲಿ ಡಿಸಿಪಿ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. 
 
ಪೀಡಿತೆ ಮತ್ತು ಎಸಿಪಿಯ ಪುತ್ರ ಕಳೆದ ವರ್ಷ ಜನವರಿ ತಿಂಗಳಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟಿದ್ದರು.  ಆನಂತರ ಆಕೆ ವಸಂತ ಕುಂಜದಲ್ಲಿರುವ ತನ್ನ ಗಂಡನ ಮನೆಯಲ್ಲಿ ಅತ್ತೆ, ಮಾವ ಮತ್ತು ಗಂಡನ ಜತೆ ವಾಸವಾಗಿದ್ದಳು. ಒಮ್ಮೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಕೆಯ ಮಾವ (ಎಸಿಪಿ) ಅತ್ಯಾಚಾರ ಎಸಗಿದ್ದಾನೆ ಮತ್ತು ಈ ಕುರಿತು ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. 
 
ಘಟನೆಯ ನಂತರ ಆಸ್ಟ್ರೇಲಿಯಾಕ್ಕೆ ಹೊರಟು ಹೋಗಿದ್ದ ಯುವತಿ ಅಲ್ಲಿಂದ ಹಿಂತಿರುಗಿದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾಳೆ. 

Share this Story:

Follow Webdunia kannada